Join The Telegram | Join The WhatsApp |
ವಿಜಯನಗರ : ಜಿಲ್ಲೆ ಕೂಡ್ಲಿಗಿ, ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ತಾಲೂಕು ಸಮಿತಿ ನೇತೃತ್ವದಲ್ಲಿ. ಗ್ರಾಮೀಣ ಪ್ರದೇಶಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಮಯಕ್ಕೆ, ಸಮರ್ಪಕವಾಗಿ ಸಾರಿಗೆ ಬಸ್ ವ್ಯೆವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ವಿದ್ಯಾರ್ಥಿ ಮುಖಂಡ ಜಿ.ಅಶೋಕ ನೇತೃತ್ವದಲ್ಲಿ ಕ.ಕ.ರ.ಸಾ.ಸಂಸ್ಥೆ ಕೂಡ್ಲಿಗಿ ಘಟಕ ಅಧಿಕಾರಿಗೆ ಮರಿಲಿಂಗಪ್ಪರವರಿಗೆ,ವಿದ್ಯಾರ್ಥಿಗಳು ತಮ್ಮ ಹಕ್ಕೊತ್ತಾಯ ಪತ್ತ ನೀಡಿದ್ದಾರೆ. ತಾಲೂಕಿನ ವಿವಿದೆಡೆ ಗ್ರಾಮೀಣ ಭಾಗಗಳಿಂದ ಪಟ್ಟಣ ಹಾಗೂ ಇತರೆಡೆಗೆ ತೆರಳಲು, ವಿದ್ಯಾಭ್ಯಾಸಕ್ಕೆಂದು ಸಾರಿಗೆ ಬಸ್ ನ್ನೇ ಅವಲಂಬಿಸಿದ್ದಾರೆ.
ಕಾರಣ ಬಸ್ಸಗಳ ಸೌಕರ್ಯ ಸೇವೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಸಮಯಕ್ಕೆ ಸರಿಯಾಗಿ ಸೌಲಭ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯ ತೋರಿದ್ದಲ್ಲಿ ಕಾನೂನು ಚೌಕಟ್ಟಲ್ಲಿ, ಹಂತ ಹಂತವಾಗಿ ಹೋರಾಟ ಮಾಡಲಾಗುವುದೆಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಟಿ.ಲಕ್ಷ್ಮಿಕಾಂತ, ಪಿ. ಮರಳುಸಿದ್ದ, ಸಿ.ಬಸವರಾಜ, ಜಿ.ಸಿ. ಅಭಿ, ಹೆಚ್.ರಾಮು, ಹೆಚ್. ದುರ್ಗೇಶ್, ಕ.ಎನ್.ಅಂಜಿನಪ್ಪ, ಪ್ರವೀಣ್ ಕುಮಾರ, ಸುದೀಪ, ಎಲ್. ಕುಮಾರ ಸ್ವಾಮಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು
ವಿ.ಜಿ.ವೃಷಭೇಂದ್ರ
Join The Telegram | Join The WhatsApp |