ದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಹೋಲಿಸಿದಿದರೆ ಈಗ ನಡೆದಿರುವ ಎರಡನೇ ಟೆಸ್ಟ್ ನಲ್ಲಿ ಕೊಂಚ ಪ್ರತಿರೋಧ ಒಡ್ಡಿದೆ.

ಇಲ್ಲಿನ ಅರುಣ ಜೇಟ್ಲಿ ಮೈದಾನದಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ 4 ನೇ ದಿನ ಭೋಜನ ವಿರಾಮದ ವೇಳೆಗೆ ವೆಸ್ಟ್ ಇಂಡೀಸ್ ಫಾಲೋ ಆನ್ ನಲ್ಲಿ ಬ್ಯಾಟ್ ಮಾಡುತ್ತ 3 ವಿಕೆಟ್ ಗೆ 252 ರನ್ ಗಳಿಸಿದ್ದು, 18 ರನ್ ಗಳ ಹಿನ್ನೆಡೆ ಅನುಭವಿಸುತ್ತಿದೆ. ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 518 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಮೊದಲ ಟೆಸ್ಟ್ ನಲ್ಲಿ ಸುಲಭವಾಗಿ ಇನ್ನಿಂಗ್ಸ್ ಸೋಲು ಅನುಭವಿಸಿದ್ದ ವೆಸ್ಟ್ ಇಂಡೀಸ್ ಈ ಟೆಸ್ಟ್ ನಲ್ಲಿಯೂ ಫಾಲೋ ಆನ್ ಪಡೆದರೂ ದ್ವಿತೀಯ ಸರದಿಯಲ್ಲಿ ಜಾನ್ ಕಾಂಪ್ ಬೆಲ್ 115 ಆಕರ್ಷಕ ಶತಕ ಹಾಗೂ ಸಾಯಿ ಹೋಪ್ ಬ್ಯಾಟಿಂಗ್ 92 ಉತ್ತಮ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ ಗೆ 252 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದು, ಇನ್ನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನು 18 ರನ್ ಗಳನ್ನು ಮಾತ್ರ ಗಳಿಸಬೇಕಿದೆ. ಅಲ್ಲದೇ ತನ್ನ ಬಳಿ ಇನ್ನು 7 ವಿಕೆಟ್ ಗಳನ್ನು ಹೊಂದಿರುವ ವಿಂಡೀಸ್ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಪ್ರತಿರೋಧ ಒಡ್ಡಿದೆ.




