ಬೆಂಗಳೂರು :ಕಳೆದ ಕೆಲವು ದಿನಗಳ ಹಿಂದೆ ಸಚಿವ ಕೆ ಎನ್ ರಾಜಣ್ಣ ಮೂರು ಸಮುದಾಯದ ಡಿಸಿಎಂ ಸ್ಥಾನ ಹೇಳಿಕೆ ವಿಚಾರ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು ಇದೀಗ ಕಾಂಗ್ರೆಸ್ ಶಾಸಕರಾದ ಅಶೋಕ ಪಟ್ಟಣ ಅವರು ಕೂಡ ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಬದಲಾವಣೆ ಆಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡುವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಆಗಲಿದೆ.
ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ ಹೇಳಿಕೆ ನೀಡಿದ್ದು ನಾನು ಹಿರಿಯ ಶಾಸಕ ಮಂತ್ರಿ ಆಗಬೇಕಿತ್ತು ಆದರೆ ಆಗಲಿಲ್ಲ 2:30 ವರ್ಷದ ಬಳಿಕ ಮಂತ್ರಿ ಮಾಡುವುದಾಗಿ ಹೇಳಿದ್ದಾರೆ.
ಜಾತಿ ನೋಡಿ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ನನಗೆ ಸಿಕ್ಕಿಲ್ಲ ಅನುಭವ ನೋಡಿ ಮಂತ್ರಿ ಮಾಡಿ ಅಂತ ನಾನು ಮನವಿ ಮಾಡಿದ್ದೆನೆ. ಎರಡು ವರ್ಷದ ಬಳಿಕ ಸಚಿವ ಸ್ಥಾನ ಕೊಡುತ್ತಾರೆ ಅನ್ನೋ ನಂಬಿಕೆ ಇದೆ ಸಚಿವ ಸ್ಥಾನ ಕೊಟ್ಟರೂ ಪಕ್ಷದಲ್ಲಿ ಇರುತ್ತೇನೆ ಕೊಡದಿದ್ದರೂ ಕೂಡ ಪಕ್ಷದಲ್ಲೇ ಮುಂದುವರೆಯುತ್ತೇನೆ.
ಪುನರಚನೆ ಮಾಡುತ್ತಾರೋ 4 5 ಸ್ಥಾನ ಬದಲಾವಣೆ ಮಾಡುತ್ತಾರೋ ಗೊತ್ತಿಲ್ಲ ಸಿಎಂ ಸ್ಥಾನದ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಫೇಮ ಸ್ಥಾನ ಬಗ್ಗೆ ನಾವು ಮಾತನಾಡಲು ಆಗಲ್ಲ ಎಂದು ತಿಳಿಸಿದರು.
ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ಪ್ರವಾಸದ ಕುರಿತಂತೆ ಪ್ರತಿಕ್ರಿಯಿಸಿದ ಅವರು,ನನ್ನ ಪಾಡಿಗೆ ನಾನು ಒಂದು ದಿನ ಅವರ ಮನೆಗೆ ಹೋಗಿ ತಿಂಡಿ ತಿಂದೆವು ಕಾಕತಾಳಿಯ ಎಂಬತ್ತ ನಾಲ್ಕೈದು ಶಾಸಕರು ಬಂದರು ತಿಂಡಿ ತಿಂದೆವು ಅಭಿವೃದ್ಧಿ ಕೆಲಸದ ಬಗ್ಗೆ ಸತೀಶ್ ಜಾರಕಿಹೊಳಿ ಜೊತೆ ಮಾತನಾಡಿ ಬಂದೆ ಮೈಸೂರಿಗೆ ಹೋಗೋಣ ಅಂತಾನೂ ಕರೆದಿಲ್ಲ ಈ ಬಗ್ಗೆ ಸಭೆ ಕೂಡ ಆಗಿಲ್ಲ ಎಂದು ಹೇಳಿದರು