Join The Telegram | Join The WhatsApp |
ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ನೂತನವಾಗಿ ನಿರ್ಮಾಣ ವಾಗಿರುವ ಐಗಳಿ ಪೋಲಿಸ್ ಠಾಣೆ ಉದ್ಘಾಟನಾ ಸಮಾರಂಭ ನಾಳೆ ಸೋಮವಾರ ದಿ. 03-010-2022 ರಂದ ಜರುಗಲಿದೆ. ಈ ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಗೋವಿಂದ ಕಾರಜೋಳ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಶಿಕಲಾ ಜೊಲ್ಲೆ ಮುಜರಾಯಿ ಸಚಿವರು. ಉದ್ಘಾಟನೆಯನ್ನು ಗೃಹ ಸಚಿವರ ಅರಗ ಜ್ಞಾನೇಂದ್ರ ವಹಿಸಲಿದ್ದಾರೆ. ವಿಶೇಷ ಆಮಂತ್ರಿಕರು ಉಪಸಭಾಅಧ್ಯಕ್ಷರು ವಿಧಾನ ಸಭೆ ಬೆಂಗಳೂರು ಇವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಥಣಿ ಶಾಸಕರು ಮಹೇಶ್ ಕುಮಠಳ್ಳಿ. ಗೌರವಾನ್ವಿತ ಅತಿಥಿಯಾಗಿ ದುರ್ಯೋಧನ ಐಹೊಳೆ ಅಧ್ಯಕ್ಷರು ಕರ್ನಾಟಕ ಆದಿಜಾಂಬಬ ಅಭಿವೃದ್ಧಿ ನಿಗಮ.ಮತ್ತು ಪಿ. ರಾಜೀವ ಅಧ್ಯಕ್ಷರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ. ಗೌರವಾನ್ವಿತ ಅತಿಥಿಗಳಾಗಿ ಲಕ್ಷಣ ಸವದಿ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಬೆಳಗಾವಿ ಜಿಲ್ಲೆ ಸಂಸದರು,ಶಾಸಕರು ವಿಧಾನ ಪರಿಷತ್ ಸದಸ್ಯರು,ಐಗಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜೇಶ್ರೀ ಶಂಕರಗೌಡ ಪೋಲಿಸ್ ಪಾಟೀಲ . ಐಗಳಿ ಗ್ರಾಮದ ಮುಖಂಡರು ಗ್ರಾಮಸ್ಥರು ಜಿಲ್ಲಾ ಪೋಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಆಗಮಿಸಲಿದ್ದಾರೆ ಎಂದು ಐಗಳಿ ಪೋಲಿಸ್ ಠಾಣೆ ಪಿಎಸ್ ಐ ಶಿವಾಜಿ ಪವಾರ ತಿಳಿಸಿದ್ದಾರೆ.
Join The Telegram | Join The WhatsApp |