ಐಗಳಿ: ಗ್ರಾಮದ ಶ್ರೀ ಬಸವೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಸಾಧಾರಣ ಸಭೆ ಶನಿವಾರದಂದು ಸಂಘದ ಸಭಾ ಭವನದಲ್ಲಿ ಸಂಘಧ ಅಧ್ಯಕ್ಷರಾದ ಬಸವರಾಜ ಬಿರಾದರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ವರ್ಷದ ವಾರ್ಷಿಕ ವರದಿಯನ್ನು ಸಂಘದ ವ್ಯವಸ್ಥಾಪಕ ಕಾಂತುಗೌಡ ಪಾಟೀಲ ಅವರು ಅವರದಿ ಮಂಡಿಸಿದರು.
ನಂತರ ಎ ಎಸ್ ನಾಯಕ ನಿವೃತ್ತಿ ಶಿಕ್ಷಕರು ಅವರು ಮಾತನಾಡಿ ಸಂಘದ ವತಿಯಿಂದ ಸಾವಯುವ ಗೊಬ್ಬರ ತರಸಬೇಕು ಎಂದು ಒತ್ತಾಯಿಸಿ ಸಹಕಾರಿ ಸಂಘದ ಕುರಿತು ರೈತರಿಗೆ ಮಾಹಿತಿ ನೀಡಿದರು.
ನಂತರ ಶಿವಾನಂದ ಸಿಂಧೂರ ಮಾತನಾಡಿ ರೈತರ ಶೇರ ಹಣವನ್ನು ಬ್ಯಾಂಕ್ ನಲ್ಲಿ ಎಪ್ ಡಿ ಇಡುವುದಕ್ಕಿಂತ ಬಿ ಡಿ ಪಿ ಸಾಲವನ್ನು ಪ್ರತಿ ರೈತರಿಗೆ ನೀಡಬೇಕು ಸಂಘದ ನಿರ್ದೇಶಕರ ಜಾಮೀನು ಪಡೆದು ಸಾಲ ನೀಡಬೇಕು ಇದರಿಂದ ಸಂಸ್ಥೆಯ ಬೆಳವಣಿಗೆ ಆಗುತ್ತದೆ ಎಂದು ಸಲಹೆ ನೀಡಿದರು.
ಗ್ರಾಮದ ಮುಖಂಡರು ಸಿ ಎಸ್ ನೇಮಗೌಡ ಅವರು ಮಾತನಾಡಿ ನಮ್ಮ ಸಂಘವು ಸರ್ಕಾರದ ನಿಯಮಗಳ ಪ್ರಕಾರ ನಡೆಯುತ್ತದೆ ರೈತರ ಶೇರ ಹಣದಲ್ಲಿ ರೈತರಿಗೆ ಸಾಲ ನೀಡುವುದು ಕಾನೂನಿನಲ್ಲಿ ಅವಕಾಶ ವಿಲ್ಲ ಸಂಘಕ್ಕೆ ಬಂದ ಲಾಭದಲ್ಲಿ ರೈತರಿಗೆ ಹೆಚ್ಚುವರಿ ಸಾಲ ನೀಡಲು ಕ್ರಮ ವಹಿಸಲಾಗುವುದು ಸಂಘದ ವತಿಯಿಂದ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ನಮ್ಮ ಸಂಘವು ಸದೃಢವಾಗಿದೆ ರೈತರು ಹೆಚ್ಚಾಗಿ ಶೇರ ಮಾಡಿ ಅದರ ಲಾಭಾಂಶ ಪಡೆಯಬೇಕು ಮತ್ತು ಸಂಘದಲ್ಲಿ ರೈತರು ಎಪ್ ಮಾಡಿ ಅದಕ್ಕೆ ಹೆಚ್ಚಿನ ಸಾಲ ಮತ್ತು ಬಡ್ಡಿ ಪಡೆಯುವ ಅವಕಾಶ ಇದೆ ಎಂದು ಹೇಳಿದರು. ಸಂಘದ ವರದಿಗೆ ಕೈ ಚಪ್ಪಾಳೆ ನೀಡುವ ಮೂಲಕ ಸರ್ವ ಸದಸ್ಯರು ಅನುಮೋದನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುನೀಲ ತೆಲಸಂಗ ಸಂಘದ ನಿರ್ದೇಶಕ ರಾದ ಅಪ್ಪು ಮಾಳಿ ಶಿವಾನಂದ ಸನದಿ ಚೇತನ್ ನೇಮಗೌಡ ಸಚೀನ ಬಳ್ಳೊಳ್ಳಿ ಸೇರಿದಂತೆ ಎಲ್ಲ ನಿರ್ದೇಶಕರು ಹಾಗೂ ಮುಖಂಡರಾದ ಯಲ್ಲಪ್ಪ ಮಿರ್ಜಿ ಮಲ್ಲಪ್ಪ ಮಾಕಾಣಿ ಸಿದ್ದಪ್ಪ ಬಳ್ಳೊಳ್ಳಿ ಅಪ್ಪಸಾಬ ಮಾಕಾಣಿ ರವಿ ಹಾಲಳ್ಳಿ ಹಣಮಂತ ಮಿರ್ಜಿ ಗ್ರಾಮದ ಎಲ್ಲ ರೈತ ಸದಸ್ಯರು ಸಂಘದ ಸಿಬ್ಬಂದಿಗಳು ಮುಂತಾದವರು ಉಪಸ್ಥಿತಿ ಇದ್ದರು.
ವರದಿ :ಆಕಾಶ. ಎಮ್