Join The Telegram | Join The WhatsApp |
ಮುಂಬೈ: ಬಾಲಿವುಡ್ ನಟಿ ಐಶ್ವರ್ಯ ರೈ ಅವರಿಗೆ ಇದೀಗ ಕಂದಾಯ ಇಲಾಖೆಯ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ. ನಾಸಿಕ್‌ನಲ್ಲಿ ಅವರಿಗಿರುವ ಆಸ್ತಿಗೆ ನಟಿ ತೆರಿಗೆಯನ್ನು ಕಟ್ಟಿಲ್ಲ ಎನ್ನುವ ದೂರು ಕೇಳಿಬಂದಿದೆ.
ಐಶ್ವರ್ಯ ಅವರು ನಾಸಿಕ್‌ನ ಸಿನ್ನಾರ್‌ನ ಅದ್ವದಿ ಪ್ರದೇಶದಲ್ಲಿ ಒಂದು ಹೆಕ್ಟೇರ್ (2.47 ಎಕರೆ) ಜಾಗಕ್ಕೆ ಮಾಲೀಕರಾಗಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿರುವ ಈ ಆಸ್ತಿಯನ್ನು ತೆರಿಗೆ ಮೌಲ್ಯ 22,000 ರೂ. ಇದೆ. ಆದರೆ ನಟಿ ತೆರಿಗೆ ಹಣವನ್ನು ಇನ್ನೂ ಕಟ್ಟಿಲ್ಲವಂತೆ.
ನಾಸಿಕ್‌ನ ಕಂದಾಯ ಇಲಾಖೆಯು ಮಾರ್ಚ್ ತಿಂಗಳೊಳಗಾಗಿ ಎಲ್ಲ ತೆರಿಗೆ ಹಣವನ್ನು ಕಟ್ಟಿಸಿಕೊಳ್ಳುವ ಗುರಿ ಹೊಂದಿದ್ದು, ಅದರಂತೆ ಈಗಾಗಲೇ ತೆರಿಗೆ ಕಟ್ಟದ ಹಲವರಿಗೆ ನೋಟಿಸ್ ನೀಡಲಾಗಿದೆ.
ನಟಿಗೂ ಕೂಡ ಸಾಕಷ್ಟು ಬಾರಿ ಈ ಬಗ್ಗೆ ಮಾಹಿತಿ ನೀಡಲಾಗಿದೆಯಾದರೂ ನಟಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗಿದೆ.
ಐಶ್ವರ್ಯ ಜತೆಯಲ್ಲಿ ಒಟ್ಟು 1200ಕ್ಕೂ ಅಧಿಕ ಮಂದಿಗೆ ಈ ರೀತಿಯ ನೋಟಿಸ್ ಅನ್ನು ನಾಸಿಕ್‌ನ ತಹಸೀಲ್ದಾರ್ ಕಚೇರಿ ನೀಡಿದೆ.
Join The Telegram | Join The WhatsApp |