ಮೊಳಕಾಲ್ಮುರು :-ತಾಲ್ಲೂಕಿನ ಕೋನಸಾಗರ ಗ್ರಾಮದಲ್ಲಿ ಗುರು ವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಕೋನಸಾಗರ ಗ್ರಾಮದ ಶ್ರೀ ವಿಶಾಲಾಕ್ಷಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಹಳೆಯ ವಿದ್ಯಾರ್ಥಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಹಳೆಯ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಹೇಳಿ ಕೊಟ್ಟ ತಮ್ಮ ಗುರುಗಳಿಗೆ ಪೇಟ ತೊಡಿಸಿ ಮದುವಣಗಿತ್ತಿಯಂತೆ ಸಿಂಗಾರ ಮಾಡಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗುರುಗಳು ತಂದೆ ತಾಯಿ ದೇವರಿಗೆ ಸಮ ಎನ್ನುವಂತೆ ಭಾರತ ದೇಶದಲ್ಲಿ ಪೂಜ್ಯನೀಯ ಭಾವವಿದೆ.
ಕಲ್ಲಾಗಿದ್ದ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಅವರ ಜೀವನವನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಗುರುಗಳ ಸಾರ್ಥಕ ಜೀವನ ಅಷ್ಟೇ ಮುಖ್ಯವಾಗಿದೆ. ಮಕ್ಕಳ ಜೀವನ ಸುಧಾರಿಸಲು ಗುರುಗಳು ಮಾಡಿದ ಶ್ರಮಕ್ಕೆ ನಾವು ಎಷ್ಟು ಕೊಟ್ಟರು ಸಾಲದು ಎನ್ನುವಂತೆ ಇಂದು ತಮಗೆ ಪಾಠ ಹೇಳಿಕೊಟ್ಟ ತಮ್ಮ ಪ್ರೀತಿಯ ಗುರುಗಳನ್ನು ಆದರದಿಂದ ಕರೆಸಿ ಪೇಟಾ ರೂಮಲು ಸುತ್ತಿ ರಾಜರಂತೆ ಮೆರವಣಿಗೆ ಮಾಡಿ ವಿಜೃಂಭಣೆಯಿಂದ ಸನ್ಮಾನ ಮಾಡಿ ತಮ್ಮ ಕೃತಜ್ಞತೆಯನ್ನು ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದರು.
ಕುಣಿತ ಮಾಡುವ ಗೊಂಬೆಗಳು,ಡೊಳ್ಳು, ತಮಟೆ, ವಾದ್ಯಗೋಷ್ಠಿಗಳೊಂದಿಗೆ ಊರಿನ ಅನೇಕ ಬೀದಿಗಳಲ್ಲಿ ಅದ್ದೂರಿಯಾದ ಮೆರವಣಿಗೆ ಮಾಡಿ ವೇದಿಕೆಗೆ ಕರೆ ತರಲಾಯಿತು.
ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ಪ್ರೌಢ ಶಾಲೆಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ದೇವೇಂದ್ರಪ್ಪ ಸಿ, ಬಿ ಶಿವಣ್ಣ, ಸುರೇಶ್, ಕೆ ಮಹಾಂತೇಶ್, ಎ ಜಯಶೀಲ ರೆಡ್ಡಿ, ಟಿ ಎಸ್ ರಾಜಶೇಖರ್, ಮೊಳಕಾಲ್ಮೂರು ನಾಗರಾಜ್, ಎಲ್ ತಿಪ್ಪೇಸ್ವಾಮಿ, ಟಿ ಬಸವರಾಜ್, ಎಂ ಮಾರಪ್ಪ ಎಸ್ ಮಂಜುನಾಥ್, ವೆಂಕಟರಮಣಚಾರಿ, ಬಿ ಶಿವಣ್ಣ ಟಿ ಬಸಪ್ಪ ಪೋಲನಾಯಕ ಮಾಸ್ಟರ್, ಮಹಮದ್ ಇನಾಯತ್ ಉಲ್ಲಾ, ಬಿ ಚಂದ್ರಣ್ಣ, ವಿ ರಂಗನಾಥ್, ಶ್ರೀನಿವಾಸ್, ವಿ ಕೆ ದೇವೇಂದ್ರಪ್ಪ, ದಾನಪ್ಪ ಟಿ ಜಯಮ್ಮ ಆರ್ ಬಸವರಾಜಪ್ಪ ಹೆಚ್, ಬಿ ಮಲ್ಲಣ್ಣ, ನಾಗರಾಜ್, ಹಾಗೂ ಟಿ ಜಿ ರಾಜಶೇಖರ್ ರವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮವನ್ನು ಕೋನಸಾಗರ ಶಾಲೆಗಳಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳಾದ ಜಿ ಎನ್ ಮೋಹನ್ ಕುಮಾರ್,ರಾಘವೇಂದ್ರ ಪ್ರಸಾದ್, ಸತ್ಯನಾರಾಯಣ ಯರಿಸ್ವಾಮಿ, ಈರಣ್ಣ ಸುರಯ್ಯ ಮೆಟ್ರಿ ಗುರುಸ್ವಾಮಿ ಡಿ ಜಿಎನ್ ಜಗದೀಶ್, ಶ್ರೀನಿವಾಸ ಕೆ ಎಚ್ ಎಂ ವಿಜಯಕುಮಾರ್ ಟೀ ರುದ್ರೇಶ್ ದುರ್ಗಪ್ಪ ಟಿ ರುದ್ರಮುನಿ ತಿಪ್ಪೇಸ್ವಾಮಿ ಎನ್ ನಾಗರಾಜ್ ಜಿಪಿ ಹಾಗೂ ಮುಂತಾದವರು ಕಾರ್ಯಕ್ರಮವನ್ನು ತುಂಬಾ ಸೊಗಸಾಗಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು ಒಟ್ಟಿನಲ್ಲಿ ಗುರುಗಳಿಗೆ ಎಷ್ಟೇ ಕೃತಜ್ಞತೆಯನ್ನು ಹೇಳಿದರೂ ಕೂಡ ಸಾಲದು ಎಂಬಂತಿತ್ತು ಈ ಗುರುವಂದನ ಜಾತ್ರೆ.
ವರದಿ:- ಪಿಎಂ ಗಂಗಾಧರ