Join The Telegram | Join The WhatsApp |
ಇಳಕಲ್: ಸಮೀಪದ ಹೊರವಲಯದ ಅಗ್ನಿಶಾಮಕ ಠಾಣೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಣೆ ಮಾಡಲಾಯಿತು ಅಂಬಿಗರ ಚೌಡಯ್ಯ ಜಯಂತಿ ಆಚರಣೆಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಮಾತನಾಡಿ 12ನೇ ಶತಮಾನದ ಒಬ್ಬ ಮಹಾನ್ ನಿಜಶರಣ ಅಂಬಿಗರ ಚೌಡಯ್ಯ ಗುತ್ತಲ ಮಹಾರಾಜನ ಮಗನನ್ನು ಬದುಕಿಸಿದ್ದ ಸಲುವಾಗಿ ಭೂಮಿಯನ್ನು ಬಳುವಳಿ ಪಡೆದಿದ್ದ ಚೌಡಯ್ಯ ನನಗೆ ಯಾವುದು ಆಸ್ತಿ ಅಂತಸ್ತು ಬೇಡ ಎಂದು ತನ್ನ ಗುರುವಾದ ಶಿವದೇವನಿಗೆ ಕೊಟ್ಟು ಅಂಬಿಗರ ಚೌಡಯ್ಯ ಸದಾ ಕಾಲವು ನಿಸ್ವಾರ್ಥಿಯಾಗಿದ್ದನು ಎಂದು ಈ ಸಮಾಜಕ್ಕೆ ತೋರಿಸಿಕೊಟ್ಟಿದ್ದಾನೆ. ಚೌಡಯ್ಯ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಜನರನ್ನು ಸೇರಿಸುವ ಕಾಯಕವನ್ನು ನಿಷ್ಠೆಯಿಂದ ಮಾಡಿದ್ದರ ಫಲವಾಗಿ ಆತನು ಅಂಬಿಗ ಚೌಡಯ್ಯನಾಗುತ್ತಾನೆ ಎಂದು ಹೇಳಿದರು. ಜಯಂತಿ ಕಾರ್ಯಕ್ರಮದಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಯಲ್ಲಪ್ಪ ಯರಗುಪ್ಪಿ. ಮಾನಸಿಂಗ್ ಲಮಾಣಿ. ಭೀಮಪ್ಪ ವಣಕಿಹಾಳ ಹಾಗೂ ಸರ್ವ ಸಿಬ್ಬಂದಿ ಹಾಜರಿದ್ದರು.
ವರದಿ. ದಾವಲ್. ಶೇಡಂ
Join The Telegram | Join The WhatsApp |