ಮುದಗಲ್ಲ: -ಅಮೃತ ಕಳಸ ಯಾತ್ರೆ- ಮಣ್ಣು ಸಂಗ್ರಹ ಕಾರ್ಯ ಕ್ರಮಕ್ಕೆ ಮುಖ್ಯಾ ಧಿಕಾರಿ ನಭಿಸಾಬ ಕಂದಗಲ್ಲ ಹಾಗೂ ಪುರಸಭೆ ಸದಸ್ಯರು ಚಾಲನೆ ನೀಡಿದರು.
ನಂತರ ಮಾತನಾಡಿದ ಮುಖ್ಯಾಧಿಕಾರಿ ನಭಿಸಾಬ ಅವರು, ನನ್ನ ಮಣ್ಣು ನನ್ನ ದೇಶ’ಅಭಿಯಾನವನ್ನು ಮುದಗಲ್ಲ ಪಟ್ಟಣದಲ್ಲಿ ಮಣ್ಣನ್ನು ಸಂಗ್ರಹಿಸಣ ಲಾಗುತ್ತಿದೆ ಎಂದರು ದೇಶದ ಅಮೃತ ಮಹೋತ್ಸವದ
ಅಂಗವಾಗಿ ವರ್ಷ ಪೂರ್ತಿ ಹಲವಾರು ಕಾರ್ಯಕ್ರಮ ಗಳ ಜೊತೆ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಮಣ್ಣನ್ನು ಸಂಗ್ರಹಿಸಿ ದೇಶದ
ಏಕತೆಯನ್ನು ಸಾರುವ ಅಮೃತ ಉದ್ಯಾನದ
ನಿರ್ಮಾಣಕ್ಕೆ ಬಳಕೆಗೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಯ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ,ಶಬಿರ್ ಪಾಶ ಮಾಜಿ ಸಾಯಿ ಸಮಿತಿ ಅಧ್ಯಕ್ಷರು ,ಸದಸ್ಯರಾದ ದುರಗಪ್ಪ ಕಟ್ಟಿಮನಿ ,
ಮೈಬುಸಾಬ ಕಡಿಪುಡಿ
,ಬಾಬು ಉಪ್ಪಾರ, ಬಿಜೆಪಿ ಮುಖಂರಾದ ಕರಿಯಪ್ಪ ಯಾದವ್ ,ನಾಗರಾಜ್ ತಳವಾರ, ನೈಮಲ್ಯ ಅಧಿಕಾರಿಗಳಾದ ಆರೀಪ್ ಹುನ್ನಿಸಾ ,ಝಾಕಿಯಾ ಬೇಗಂ, ಚನ್ನಮ ದಳವಾಯಿ ಹಿರೇಮಠ,ಸಿಬ್ಬಂದಿ ಗಳಾದ ಮಾಲಿಂಗರಾಯ, ಜಿಲಾನಿಪಾಶ ,ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ