ಸಿರುಗುಪ್ಪ : –ತಾಲೂಕಿನ ಗೋಸುಬಾಳು ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಅಂಗನವಾಡಿ ಕೇಂದ್ರದ ಸುತ್ತಲೂ ಚರಂಡಿ ನೀರಿನಿಂದಾಗಿ ಕೇಂದ್ರಕ್ಕೆ ಬರುವ ಚಿಣ್ಣರಿಗೆ ತೀವ್ರ ತೊಂದರೆಯಾಗುತ್ತಿದ್ದು ಸ್ಥಳಕ್ಕೆ ಸಿಡಿಪಿಓ ಜಿ.ಪ್ರದೀಪ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಸಮಸ್ಯೆಯ ಇತ್ಯರ್ಥಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಈ ದುರಾವ್ಯಸ್ಥೆಯನ್ನು ಸರಿಪಡಿಸಲಾಗುವುದೆಂದರು.
ಚರAಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಶಾಲೆಗೆ ಅಕ್ಷರ ದಾಸೋಹ, ಅಂಗನವಾಡಿ ಪೌಷ್ಟಿಕ ಆಹಾರದ ಸಾಮಾಗ್ರಿಗಳನ್ನು ತಂದು ಹಾಕುವ ವಾಹನಗಳಿಗೆ ಹಾಗೂ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ, ವಯೋವೃದ್ದರಿಗೆ ಸಮಸ್ಯೆಯಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಶಾಲೆಯಲ್ಲಿನ ಧೀರ್ಘಕಾಲಿಕ ಸಮಸ್ಯೆಯಾದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶೌಚಾಲಯ ವ್ಯವಸ್ಥೆಯಿಲ್ಲದಿರುವುದರ ಬಗ್ಗೆ ಪತ್ರಿಕೆಯಲ್ಲಿ ಭಿತ್ತರಿಸಲಾಗಿತ್ತಾದರೂ ಮತ್ತದೇ ಯಥಾಸ್ಥಿತಿ ಮುಂದುವರೆದಿದೆ.
ಅಂದಿನ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರು ಜಾಗದ ಕೊರತೆ ಬಗ್ಗೆ ಬೊಟ್ಟು ಮಾಡಿ ಕೈತೊಳೆದುಕೊಂಡರು.ಮಳೆಗಾಲ ಅಲ್ಲದಿದ್ದರೂ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಪ್ಲೋರೈಡ್ಯುಕ್ತ ಬೋರ್ವೆಲ್ ನೀರೇ ಗತಿಯಾಗಿದೆ.ಸಮಸ್ಯೆಗೆ ಪರಿಹಾರ ಹುಡುಕುವ ಅಧಿಕಾರಿಗಳೇ ಕೈಚೆಲ್ಲಿ ಕುಳಿತುಕೊಂಡರೆ ಇಂತಹ ಸಮಸ್ಯೆಗಳು ಮಕ್ಕಳ ಸಾಕ್ಷರತ ಗುಣಮಟ್ಟಕ್ಕೆ ಕಾರಣವಾಗಬಹುದಾಗಿದೆ.
ಸೂಕ್ತ ಸೌಲಭ್ಯಗಳಿಲ್ಲದೇ ಸೊರಗಿರುವ ಗ್ರಾಮದಲ್ಲಿ ಅಭಿವೃದ್ದಿಯತ್ತ ಗಮನಹರಿಸದ ಅಧಿಕಾರಿಗಳು ಮಾದ್ಯಮಗಳಿಗೆ ಮಾಹಿತಿ ನೀಡಿದರೆ ಸಮಸ್ಯೆ ಪರಿಹಾರವಾಗುತ್ತಾ? ಮಾದ್ಯಮಗಳಿಂದಲೇ ಅಭಿವೃದ್ದಿ ಮಾಡಿಸಿಕೊಳ್ಳಿಯೆಂದು ಇಲ್ಲಿನ ಸಮಸ್ಯೆಗಳ ಬಗ್ಗೆ ದೂರಿದ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಬೆದರಿಸುವ ಪ್ರಯತ್ನ ನಡೆಯುತ್ತಿದೆಂಬ ಆರೋಪವೂ ಕೇಳಿಬಂದಿತು.
ಇನ್ನು ಮುಂದಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ನಿರ್ಲಕ್ಷö್ಯ ಧೋರಣೆ ತೋರುತ್ತಿರುವ ಅಧಿಕಾರಿಗಳನ್ನು ಸರಿ ದಾರಿಗೆ ತಂದು ಗ್ರಾಮದ ಸ್ವಚ್ಛತೆ, ರಸ್ತೆ ಶಿಕ್ಷಣ, ನೀರು, ಆರೋಗ್ಯದಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಗ್ರಾಮಸ್ಥರಾದ ದೊಡ್ಡ ಮಾರೆಣ್ಣ ಕಾರಣ್ಣ, ರಮೇಶ, ದೇವರಾಜ, ಆಗ್ರಹಿಸಿದರು.
ವರದಿ. ಶ್ರೀನಿವಾಸ ನಾಯ್ಕ