This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Feature Article

ಲೊಕಶಾಹೀರ ಸಾಹಿತ್ಯರತ್ನ.ಅಣ್ಣಾ ಭಾವು ಸಾಠೆ

Join The Telegram Join The WhatsApp

ವಿಶೇಷ ಲೇಖನ : ಎಸ್.ಆಶೀಷಕುಮಾರ

ಅಣ್ಣಾ ಭಾವು ಸಾಠೆಯವರ ಸಾಹಿತ್ಯವೆಂದರೆ ಅದು ಮಾನವ ಮುಕ್ತಿಯ ಆವಿಷ್ಕಾರ.ಅಣ್ಣಾ ಭಾವು ಸಾಠೆ ಎಂದರೆ ದಲಿತ ಸಾಹಿತ್ಯದ ಶಿಲ್ಪಿಕಾರರು. ಆಗಿನ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಬರಗಾಲವಿತ್ತು,ನಿಜವಾದ ಬರಗಾಲ ಹಾಗೂ ವಿಚಾರದ ಬರಗಾಲವು.ಅಣ್ಣಾ ಭಾವು ಸಾಠೆಯವರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ.ವಾಳವಾ ತಾಲ್ಲೂಕು.ವಾಟೆಗಾಂವ್ ಎಂಬಲ್ಲಿ ಅಗಸ್ಟ್ 1-1920 ರಲ್ಲಿ ಮಾಂಗ (ಮಾದಿಗ)ಎಂಬ ಶೋಷಿತ ಸಮುದಾಯದ ಭಾವುರಾವ್ ಸಾಠೆ ಮತ್ತು ತಾಯಿ ಬಾಳುವಾಯಿಯವರ ಉದರದಲ್ಲಿ ಜನಿಸಿದ ಮಗುವೇ ತುಕಾರಾಮ.

ಪ್ರಸಿದ್ಧಿ ಅಣ್ಣಾ ಭಾವು ಸಾಠೆಯೆಂದು.

ಅಣ್ಣಾ ಅವರ ಪ್ರಸಿದ್ಧಿ ಕೇವಲ ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರವಲ್ಲ ವಿದೇಶದ ರಷ್ಯಾದಲ್ಲಿ ಈ ಹೆಸರು ಅಜರಾಮರ ವಾಗಿದೆ.ಆದರೆ ದುರಂತವೆಂದರೆ ಭಾರತ ದೇಶದಲ್ಲಿ ಅಣ್ಣಾ ಹುಟ್ಟಿದರು ಎಷ್ಟೋ ಜನರಿಗೆ ಇಂದಿಗೂ ಇವರ ಹೆಸರು ಪರಿಚಯವಿಲ್ಲ.ಅಣ್ಣಾ ಅವರ ಕುಟುಂಬವು ಮುಂಬೈಗೆ ಸ್ಥಳಾಂತರವಾಯಿತು.ಅವರ ಹೊಸ ವಿಚಾರಗಳು ಜಾಗತಿಕ ರಾಜಕಾರಣದ ಕಡೆ ಹೊರಳಿತು.ಮನೆಯ ಪರಿಸ್ಥಿತಿ ಕಡು ಬಡತನದ ಕೂಡಿದ ಅಸ್ಪೃಶ್ಯ ಸಮುದಾಯದ ಅಣ್ಣಾಭಾವು ಸಾಠೆ ಅವರಿಗೆ ಔಪಚಾರಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ ಹೊಟ್ಟೆಪಾಡಿಗಾಗಿ ತಮ್ಮ ಊರಿನಿಂದ ಮುಂಬೈಗೆ ವಲಸೆ ಬಂದು ಜವಳಿ ಗಿರಣಿಗಳಲ್ಲಿ ಕೆಲಸಕ್ಕೆ ಸೇರಿಕೊಂಡರು.

ಅಣ್ಣಾ ಅವರು ಬೀದಿ ಬದಿಯಲ್ಲಿ ಬರೆಯಲ್ಪಟ್ಟಿದ್ದಂತಹ ಬೋರ್ಡ್ ಹಾಗೂ ಗೋಡೆಯ ಮೇಲಿನ ಅಕ್ಷರವನ್ನು ನೋಡಿ ಮುಂದೆ ಓದಲು ಹಾಗೂ ಬರೆಯಲು ಕಲಿತುಕೂಂಡರು.

*1944 ರಲ್ಲಿ ಕೆಂಪು ಭಾವುಟ ಕಲಾ ಪತ್ರಿಕೆಯನ್ನು ಸ್ಥಾಪನೆ ಮಾಡಿದರು.*

ಈ ಪತ್ರಿಕೆಯ ಮುಖಾಂತರ ಮುಂದೆ ಅಣ್ಣಾ ಮಹಾರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ಶಾಹೀರ ನಾಟಕಕಾರರಾಗಿ ಉದಯಿಸಿದರು.

*ಅಣ್ಣಾ ಅವರು ಊರು ಹೊರಗಿನ ಸಮಾಜದವರು ಮನುಷ್ಯರು ಎಂಬುದಾಗಿ ಬದುಕಬೇಕಾಗಿದೆ ಎಂದು ಅದಕ್ಕಾಗಿ ಅವರು ದುಃಖ ವೇದನೆಯನ್ನು ತಮ್ಮ ಸಾಹಿತ್ಯದಲ್ಲಿ ರಚಿಸಲು ಪ್ರಾರಂಭಿಸಿದರು.* ಜಾಗತಿಕ ಕೀರ್ತಿಯ ಕಾದಂಬರಿಕಾರ ಎಂದು ಅಣ್ಣಾ ಪ್ರಸಿದ್ಧರಾದರು.

ವೈಚಾರಿಕ ಹಾಗೂ ಸಾಮಾಜಿಕ ಬಾಂಧವ್ಯ ಅವರ ಮುಖ್ಯ ಸೂತ್ರವಾಗಿತ್ತು.ಅಣ್ಣಾ ಅವರು ವಿಶಿಷ್ಟ ಸಮಾಜದ ವಿಶಿಷ್ಟ ಜಾತಿಯ ಅಲ್ಲದವರ ಜಗತ್ತಿನ ಕಷ್ಟದ ಜನರ ಪೀಡಿತ ವಗ೯ದ ಪ್ರತಿನಿಧಿಯಾಗಿದ್ದರು.

ಇವರು ಶಾಲೆ,ಕಾಲೇಜು ಮೆಟ್ಟಲು ಹತ್ತದಿದ್ದರೂ ಅವರ ಸಾಹಿತ್ಯ 35 ಭಾಷೆಗೆ ಅನುವಾದಗೊಂಡು ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. *ಇವತ್ತಿಗೂ ಅಣ್ಣಾ ಅವರ ಸಾಹಿತ್ಯ ಮಹಾರಾಷ್ಟ್ರ ರಾಜ್ಯ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿ ಸೇಪ೯ಡಿಸಲಾಗಿದೆ.ಅಣ್ಣಾ ಭಾವು ಸಾಠೆಯವರ ಸಾಹಿತ್ಯದ ಮೇಲೆ ಅನೇಕರು ಪಿ .ಎಚ್ .ಡಿ ಪ್ರಬಂಧ ಮಂಡಿಸಿದ್ದಾರೆ.*  ಮರಾಠಿ ಭಾಷೆಯಲ್ಲಿ1959 ರಲ್ಲಿ ಪ್ರಸಿದ್ಧ ಫಕೀರಾ ಎಂಬ ಕಾದಂಬರಿ ರಚಿಸಿದ್ದಾರೆ.

ಮರಾಠಿ ಪವಾಡ ಶೈಲಿಯುಲ್ಲಿ ಹಾಡುಗಳನ್ನು ಹಾಗೂ ನಾಟಕಗಳನ್ನು ರಚಿಸಿದ್ದಾರೆ.ಜನರು ಸುಧಾರಣೆಯಾಗಲು ಆಗಿನ ಕಾಲದಲ್ಲಿ ಪವಾಡ ಹಾಗೂ ಲಾವಣಿಯನ್ನು ಹಾಡುತ್ತಿದ್ದರು.ಹಾಗಾಗಿ ಅವರು ತುಂಬಾ ಜನಪ್ರಿಯರಾಗಿದ್ದರು.

ಅಣ್ಣಾ ಕಮುನಿಷ್ಟ ವಿಚಾರದಿಂದ ತುಂಬಾ ಪ್ರಭಾವಿತರಾಗಿದ್ದರು.ಭಾರತಿಯ ಕಮುನಿಷ್ಟ ಪಕ್ಷದ ನಾಯಕರು ಶ್ರೀಪಾದ.ಡಾಂಗೆ ಅವರಿಂದ ಪ್ರಭಾವಿತರಾಗಿ ಕ್ರಿಯಾಶೀಲ ಕಾಯ೯ಕತರಾಗಿ ಕೆಲಸ ಮಾಡಿದರು.

ಮಹಾರಾಷ್ಟ್ರದ ಸಂಯುಕ್ತ ಮರಾಠಿ ಚಳುವಳಿಯಲ್ಲಿ ಅಣ್ಣಾ ಅವರ ಕೊಡುಗೆ ಬಹಳಷ್ಟು ಇದೆ.(ಇದರ ಬಗ್ಗೆ ಒಂದು ಪವಾಡಾ ಕೂಡಾ ಬರೆದಿದ್ದಾರೆ.)

ಆಗಿನ ಕಾಲದಲ್ಲಿ ಮುಂಬೈ ಯಾರದ್ದು? ಲೋಕ ನಾಟಕ ತುಂಬಾ ಪ್ರಸಿದ್ಧಿ ನಡೆದಿತ್ತು.

*ಅಣ್ಣಾ ಅವರು ಆಗಿನ ದಿನಗಳಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ವಿಚಾರಗಳನ್ನು ಹೋರಾಟಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸವನ್ನು ಮಾಡಿದ್ದಾರೆ.* ದಲಿತರ,ಕಾಮಿ೯ಕರ ಹಕ್ಕುಗಳಿಗಾಗಿ ತುಂಬಾ ಕೆಲಸವನ್ನು ಅಣ್ಣಾ ಮಾಡಿದ್ದಾರೆ.

*1961 ರಲ್ಲಿ ರಷ್ಯಾದ ಇಂಡೋ ಕಲ್ಚರಲ್ ಸೊಸೈಟಿ ಅಣ್ಣಾ ಅವರ ಸಮಾಜ ಸುಧಾರಣೆ ಕೆಲಸ ನೋಡಿ ಅಹ್ವಾನಿಸಿತು.* ರಷ್ಯಾದಲ್ಲಿ ಆದ ಅನುಭವದ ಪ್ರವಾಸವ ಕಥೆಯನ್ನು ಬರೆದಿದ್ದಾರೆ.

35 ಕಾದಂಬರಿ

12 ಕಥೆಗಳು

11 ಪವಾಡ ಗೀತೆಗಳು

3 ನಾಟಕಗಳು

1 ಪ್ರವಾಸ ಕಥನ

9 ಲಾವಣಿ ಗೀತೆಗಳು

13 ವಗ ನಾಟಕಗಳು

*ಅಣ್ಣಾ ಅವರ ಕಾದಂಬರಿಗಳ ಮೇಲೆ ಚಲನಚಿತ್ರ ಕೂಡಾ ಬಂದಿದೆ ಅದರಲ್ಲಿ.*

*1)ಫಕೀರಾ 1962*

*2)ವಾರಣಾಚಿ ವಾಘ*

*3)ವೈಜಯಂತಿ.*

*4)ಅವಧಿ*

*5)ಅಲಗುಜ್*

ರಷ್ಯಾ ರಾಜಧಾನಿ ಮಾಸ್ಕೊ ನಗರದಲ್ಲಿ ಅಣ್ಣಾಭಾವು ಸಾಠೆ ಅವರ ಪ್ರತಿಮೆಯನ್ನು ಸೆಪ್ಟಂಬರ್ 14 2022ರಂದು ಉದ್ಘಾಟನೆಯಾಗಿದೆ. ಹಾಗೂ ಮಾಸ್ಕೋದ ಭಾರತೀಯ ರಾಯಭಾರ ಕಛೇರಿಯಲ್ಲಿ ಅಣ್ಣ ಭಾವು ಸಾಠೆಯವರ ಆಯಿಲಿನ ಪೇಂಟಿಂಗ್ ಚಿತ್ರವನ್ನು ಕೂಡ ಅನಾವರಣ ಮಾಡಲಾಗಿದೆ. ಮಾಸ್ಕೋದಲ್ಲಿ ಅಣ್ಣಾಭಾವು ಸಾಠೆ ಅವರ ಪ್ರತಿಮೆಯನ್ನು ಅನಾವರಣಗೊಳಿಸಿರುವ ಮಹಾರಾಷ್ಟ್ರಕ್ಕೆ ಒಂದು ಐತಿಹಾಸಿಕ ಮತ್ತು ಹೆಮ್ಮೆಯ ವಿಚಾರ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅಭಿಪ್ರಾಯ ಪಟ್ಟಿದ್ದಾರೆ

*ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿಯು 1961 ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತು,* 2002 ರಲ್ಲಿ ಭಾರತೀಯ ಅಂಚೆ ಇಲಾಖೆಯಿಂದ ಅಣ್ಣ ಅವರ ಭಾವಚಿತ್ರದ ಚೀಟಿ ಹೋರ ತಂದಿದೆ.*

ನಾನೇನು ಅನುಭವಿಸಿದ್ದೇನೆ. ಯಾವುದನ್ನು ನೋಡಿದ್ದೇನೆ. ಯಾವುದರಲ್ಲಿ ನಾನು ತೋಡಗಿದ್ದೇನೆ ಅದನ್ನು ನಿಮ್ಮೇದರು ಸಾಹಿತ್ಯದ ಮೂಲಕ ಬಿಚ್ಚಿಟ್ಟಿದ್ದೇನೆ.

ಹಿಂತಹ ಪ್ರಸಿದ್ಧ ಸಮಾಜಸುಧಾರಕರು ಸಾಹಿತಿ 18 ಜುಲೈ 1969 ರಲ್ಲಿ ನಿಧನರಾದರು.


Join The Telegram Join The WhatsApp
Bharath Vaibhav
the authorBharath Vaibhav

Leave a Reply