Join The Telegram | Join The WhatsApp |
ಬೆಳಗಾವಿ: ಶುಕ್ರವಾರ ನಗರದ ನಾನಾವಾಡಿಯ ಸುರೇಶ ಅಂಗಡಿ ಕಾಲೇಜ್ ಪಕ್ಕದಲ್ಲಿ ನಿರ್ಮಿಸಿರುವ ಭವ್ಯ ಮೇಳದಲ್ಲಿ ಹಾಕಿದ, ಅದ್ದೂರಿ ವೇದಿಕೆಯಲ್ಲಿ ಶುಭಹಾರೈಸುತ್ತ ಅನ್ನೊತ್ಸವ 2023ಕ್ಕೆ ಸಂಸದೆ ಮಂಗಳಾ ಅಂಗಡಿ ಅವರು ಚಾಲನೆ ನೀಡಿದರು…
ಬೆಳಗಾವಿಯ ರೋಟರಿ ಕ್ಲಬ್ ವತಿಯಿಂದ ಕಳೆದ 25 ವರ್ಷಗಳಿಂದ ಇಂತಹ ಅನ್ನೋತ್ಸವ ಮೇಳವನ್ನು ಮಾಡಿಕೊಂಡು ಬರುತ್ತಿದ್ದು,. ಈ ವರ್ಷದ ಮೇಳ ಅದ್ದೂರಿಯಾದ ಬ್ರಹತ್ ಆದ ಮೇಳವಾಗಿ ಎಲ್ಲರನ್ನು ಆಕರ್ಷಿಸುವ ತಾಣವಾಗಿದೆ..
ಮೇಳ ಉದ್ಘಾಟಿಸಿ ಮಾತನಾಡಿದ ಸಂಸದೆ ಮಂಗಳಾ ಅಂಗಡಿ ಆಯೋಜಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅನ್ನೋತ್ಸವ ಯಶಸ್ವಿಯಾಗುವಂತೆ ಶುಭ ಹಾರೈಸಿದರು..
200ಕ್ಕಿಂತಲೂ ಹೆಚ್ಚಿನ ಅಂಗಡಿಗಳು, ಅದರಲ್ಲಿ 130 ತಿಂಡಿ, ತಿನಿಸು, ಊಟದ ಅಂಗಡಿಗಳಿದ್ದು, ಉಳಿದ ಅಂಗಡಿಗಳು ಗೃಹೋಪಯೋಗಿ ಸಾಮಗ್ರಿಗಳ ಸ್ಟಾಲಗಳಾಗಿವೆ..
ಜನೆವರಿ 6 ರಿಂದ 16ರ ವರೆಗೆ ಸುಮಾರು ಹತ್ತು ದಿನಗಳ ವರೆಗೆ ನಡೆಯುವ ಈ ಮೇಳವು, ಸಂಜೆ ಐದರಿಂದ ರಾತ್ರಿ ಹತ್ತು ಮೂವತ್ತರವರೆಗೆ ಇರುತ್ತದೆ, ವಿಶಾಲವಾದ ಸ್ಥಳದಲ್ಲಿ ಹಾಕಲಾದ ಈ ಬ್ರಹತ್ ಮೇಳದಲ್ಲಿ ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್, ಮನರಂಜನೆ, ಕುಳಿತುಕೊಂಡು ಆಹಾರ ಸೇವಿಸುವ, ಮಕ್ಕಳಿಗೆ ಆಟ ಆಡುವ, ಹೀಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ,,
ದೇಶದ ಸುಮಾರು 17 ರಾಜ್ಯಗಳಿಂದ ಆಗಮಿಸಿದ ವಿವಿಧ ಪ್ರಕಾರದ ಆಹಾರ ತಯಾರಕರು ಇಲ್ಲಿ ಆಗಮಿಸಿ ತಮ್ಮ ಆಹಾರ ವಿಶೇಷತೆಯನ್ನು ಹಾಗೂ ಸವಿಯನ್ನು ಬೆಳಗಾವಿ ಜನತೆಗೆ ರುಚಿಸಲಿದ್ದಾರೆ, ಈ ಮೇಳದ ಪ್ರವೇಶ ಫೀ ಕೇವಲ 40 ರೂಪಾಯಿ ಆಗಿದ್ದು, ಒಳಗೆ ಬಂದಾಗ ಜನರಿಗೆ ಮನೋಲ್ಲಾಸ ಮಾತ್ರ ತುಂಬಾ ಆಗುವದು..
ಅರಿಹಂತ ಹಾಸ್ಪಿಟಾಲಿಟಿ ಹಾಗೂ ಕಮ್ಕೋ ಪ್ರಾಯೋಜಕತ್ವದಲ್ಲಿ ಆಯೋಜನೆ ಆದ ಈ ಮೇಳದ ಸಕಲ ಜವಾಬ್ದಾರಿಯನ್ನು ಬೆಳಗಾವಿಯ ರೋಟರಿ ಕ್ಲಬ್ ವಹಿಸಿಕೊಂಡು, ಉತ್ತಮ ಹಾಗೂ ಅದ್ದೂರಿ ರೀತಿಯಲ್ಲಿ ಆಯೋಜನೆ ಮಾಡಿದ್ದು ವಿಶೇಷ ..
ಈ ವೇಳೆ ನಮ್ಮ ಸುದ್ದಿ ವಾಹಿನಿಯೊಂದಿಗೆ ಬೆಳಗಾವಿ ರೋಟರಿ ಕ್ಲಬನ ಮುಂದಿನ ಜಿಲ್ಲಾ ಗವರ್ನರ್ ಆದ ಶರದ ಎಸ್ ಪೈ ಅವರು ಹಾಗೂ 2023ರ ಈ ಅನ್ನೋತ್ಸವದ ರುವಾರಿ ಚೇರ್ಮನ್ನರಾದ ಪರಾಗ ಭಂಡಾರಿ ಅವರು ಮಾತನಾಡಿ ಮೇಳದ ವಿಶೇಷತೆಗಳನ್ನು ಹೇಳಿಕೊಂಡರು..
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದೆ ಮಂಗಳಾ ಅಂಗಡಿ, ಮೇಳದ ಮುಖ್ಯ ಪ್ರಾಯೋಜಕರಾದ ಆರಿಹಂತ ಆಸ್ಪತ್ರೆ ಮುಖ್ಯಸ್ಥರು, ರೋಟರಿ ಕ್ಲಬನ ಪದಾಧಿಕಾರಿಗಳು, ಚೇರ್ಮನಗಳು, ಇತರ ಪ್ರಮುಖರು ಭಾಗಿಯಾಗಿದ್ದರು..
ವರದಿ : ಪ್ರಕಾಶ ಕುರಗುಂದ..
Join The Telegram | Join The WhatsApp |