Join The Telegram | Join The WhatsApp |
ಬೆಂಗಳೂರು : ಅಕ್ರಮ ಪಿ ಎಸ್ ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಲೂಟೂತ್ ಮೂಲಕ ಪರೀಕ್ಷೆ ಬರೆದಿದ್ದ ಸಂಜೀವ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಕಲ್ಯಾಣ ಕರ್ನಾಟಕ ಕೋಟದಲ್ಲಿ 14 ನೇ ರ್ಯಾಂಕ್ ಪಡೆದಿದ್ದನು.
ಅಕ್ರಮ ಪಿ ಎಸ್ ಐ ನೇಮಕಾತಿಯ ಕಿಂಗ್ ಪಿನ್ ರೌದ್ರಗೌಡ ಪಾಟೀಲ್ ನೆರವಿನಿಂದ ಈತ ಅಕ್ರಮವಾಗಿ ಪರೀಕ್ಷೆ ಬರೆದಿದ್ದನು. ಈ ಸಂಬಂಧ ಗುಲಬರ್ಗಾ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ, ಆರೋಪಿ ಸಂಜೀವ್ ಕುಮಾರ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ವಿವಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಜೀವ್ ಕುಮಾರ್ ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ ನೌಕರನಾಗಿದ್ದನು.
Join The Telegram | Join The WhatsApp |