ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪಿ ಚೈತ್ರ ಕುಂದಾಪುರಳ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೊರಬರುತ್ತಲೇ ಇವೆ.
ಇದೀಗ ಇನ್ನೊಂದು ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದು ಮೀನುಗಾರಿಕೆ ಮಾಡಿಕೊಂಡಿದ್ದ ಪ್ರತಿಯೊಬ್ಬನಿಗೆ ಬಟ್ಟೆ ಅಂಗಡಿ ಇಟ್ಟು ಕೊಡಿಸುವುದಾಗಿ ಹೇಳಿ ಸುಮಾರು ಐದು ಲಕ್ಷ ರೂಪಾಯಿ ಪಡೆದುಕೊಂಡು ವಂಚನೆ ಮಾಡಿರುವ ಘಟನೆ ಬಳಕೆಗೆ ಬಂದಿದೆ.
ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ ಹೇಳಿ 5 ಲಕ್ಷ ರೂಪಾಯಿ ವಂಚನೆ ಮಾಡಿದ್ದಾಳೆ ಎಂದು ಸುಧೀನ್ ಎಂಬುವವರ ದೂರು ಆಧರಿಸಿ FIR ದಾಖಲಿಸಲಾಗಿದೆ.ಬಿಜೆಪಿಯ ಸಚಿವರು ಮತ್ತು ಶಾಸಕರು ಪರಿಚಯ ಇದ್ದಾರೆ ಎಂದು ಹೇಳಿ ಚೈತ್ರಾ ವಂಚನೆ ಮಾಡಿದ್ದಾಳೆ.
2018 ರಿಂದ 2022ರ ವರೆಗೆ ಸುಮಾರು 5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾಳೆ.ಮೀನುಗಾರಿಕೆ ಕೆಲಸ ಮಾಡಿಕೊಂಡಿರುವ ದೂರದ ಸುಧಿನ್ ಇದೀಗ ಚೈತ್ರಾ ವಿರುದ್ಧ ವಂಚನೆ ದೂರು ಸಲ್ಲಿಸಿದ್ದಾರೆ.
ಇನ್ನು ಕಳೆದ ನಾಲ್ಕು ದಿನಗಳ ಹಿಂದೆ ಸಿಸಿಬಿ ಅಧಿಕಾರಿಗಳು ಚೈತ್ರಾಳನ್ನು ವಶಪಡಿಸಿಕೊಂಡಿದ್ದರು ಈ ವೇಳೆ ಆರೋಗ್ಯ ಸಮಸ್ಯೆ ಎಂದು ನಾಲ್ಕು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಳು ಇಂದು ಚೈತ್ರ ಆಸ್ಪತ್ರೆದ ಡಿಸ್ಚಾರ್ಜ್ ಆಗಿದ್ದು ಸಿಸಿಬಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.