ಅಥಣಿ:- ಸಪ್ಟಂಬರ್ 15 ರಂದು ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ ಕಡಪಾ- ಚಿತ್ತೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಅಥಣಿ ತಾಲೂಕಿನ ಬಡಚಿ ಗ್ರಾಮದ ಆರು ಜಣರು ಸಾವಣ್ಣಪ್ಪಿದ್ದರು.
ತಿರುಪತಿ ಪ್ರವಾಸಕ್ಕೆ ತೆರಳಿದ ಆಜೂರ್ ಕುಟುಂಬದ 14 ಜನರಲ್ಲಿ ನಾಲ್ವರು ಹಾಗೂ ವಾಹನ ಚಾಲಕ ಒಟ್ಟು ಐದು ಜಣ ಸ್ಥಳದಲ್ಲೆ ಮೃತ ಪಟ್ಟಿದ್ದರು ಕಸ್ತೂರಿ ಆಜೂರ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಿಂದ – ಬೆಳಗಾವಿಗೆ ತರುವಾಗ ರಸ್ತೆ ಮದ್ಯದಲ್ಲೇ ಕೊನೆವುಸಿರೆಳೆದಿದ್ದರೂ ಇನ್ನುಳಿದ 7 ಜನರಲ್ಲಿ ಇಂದು ನಸುಕಿನ ಜಾವ ಮತ್ತೊರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೆಡಾಗಿದ್ದಾನೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವರಾಜ್ ಗಿರಿಮಲ್ಲ ಆಜೂರ್ (32) ಮಹಾರಾಷ್ಟ್ರ ದ ಮಿರಜ್ ಆಸ್ಪತ್ರೆಗೆ ತರುವಾಗ ರಸ್ತೆ ಮದ್ಯ ಸಾವು ಸಂಭವಿಸಿದೆ
ಬಸವರಾಜ ಸಾವಿನಿಂದ ಆಜೂರ ಕುಟುಂಬದ ಸಾವಿನ ಸಂಖ್ಯೆ 6 ಕ್ಕೆ ಏರಿದೆ ಇನ್ನುಳಿದ ತಿರುಪತಿ ತಿಮ್ಮಪ್ಪನ ಪ್ರವಾಸದಲ್ಲಿ ಕುಟುಂಬ ಕಳೆದುಕೊಂಡ ಆಜೂರ ಮನೆತನದಲ್ಲಿ ನೀರವ ಮೌನ ಅವರಿಸಿದೆ.
ವರದಿ: ಅಬ್ಬಾಸ ಮುಲ್ಲಾ.