ಗುಪ್ಪ : ನಗರದ ಪಾರ್ವತಿ ನಗರದಲ್ಲಿರುವ ನಿವಾಸದಲ್ಲಿ ಶಾಸಕ ಬಿ.ಎಮ್.ನಾಗರಾಜ ಅವರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ತಾಲೂಕು ಸಮಿತಿ ಅಧ್ಯಕ್ಷೆ ವಿ.ದುರುಗಮ್ಮ ಮಾತನಾಡಿ 2001 ರಲ್ಲಿ ಪ್ರಾರಂಭವಾದ ಈ ಬಿಸಿಯೂಟ ಯೋಜನೆಯಡಿ ಕೆಲಸಕ್ಕೆ ಸೇರಿದಾಗ 35 ರಿಂದ 45 ವಯಸ್ಸಿನ ಬಹುತೇಕ ಮಹಿಳೆಯರು 60 ವರ್ಷಕ್ಕೆ ತಲುಪಿದ್ದಾರೆ. ಈಗ ಅವರಿಗೆ ಹೃದಯ, ಕಾಲುಗಂಟು, ಬೆನ್ನುನೋವಿನಂತಹ ತೊಂದರೆಗಳಿಂದ ಬಳಲುತ್ತಿದ್ದು ನಿವೃತ್ತವಾದ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ 1ಲಕ್ಷ ಇಡುಗಂಟು ನೀಡಬೇಕು.ಅವರ ನಂತರ ಅವರ ಮನೆವರಿಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು.ಬಿಸಿಯೂಟ ಯೋಜನೆಯ ನೌಕರರನ್ನು ಖಾಯಂ ಮಾಡಬೇಕು, ಖಾಯಂ ಮಾಡುವ ತನಕ 45, 46ನೇ ಭಾರತೀಯ ಕಾರ್ಮಿಕ ಸಮ್ಮೇಳನ ಶಿಪಾರಸ್ಸಿನಂತೆ ಕಾರ್ಮಿಕರೆಂದು ಗುರುತಿಸಬೇಕು.ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಸರ್ಕಾರದಿಂದ ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸಿದರು.ಇದೇ ವೇಳೆ ಪ್ರಧಾನ ಕಾರ್ಯದರ್ಶಿ ರಾಧಮ್ಮ, ಖಜಾಂಚಿ ಗಂಗಮ್ಮ, ಬೀಬಿಜಾನ್, ಗೋವಿಂದಮ್ಮ, ಯು. ನಾಗಲಕ್ಷ್ಮಿ, ಇನ್ನಿತರರು ಇದ್ದರು.
ವರದಿ .ಶ್ರೀನಿವಾಸ ನಾಯ್ಕ