———————-ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ: ಹಾರೋಗೆರೆ ಮಹೇಶ್
ಪಾವಗಡ: ತಾಲೂಕಿನ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸರ್ಕಾರದಿಂದ ನೀಡುವ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಎಂದು ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಹಾರೋಗೆರೆ ಮಹೇಶ್ ತಿಳಿಸಿದರು.
ಪಾವಗಡ ತಾಲೂಕಿನ ಜೂಲಪ್ಪನ ಹಟ್ಟಿ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಸಾಂಪ್ರದಾಯಿಕ ಹಾಲೊಯ್ಯುವ ಹಬ್ಬದಲ್ಲಿ ಭಾಗವಹಿಸಿ.ಕಾಳಿನಾಗಮ್ಮ ಕರಿಯಮ್ಮ ಹಾಗೂ ಜುಂಜಪ್ಪ ಸ್ವಾಮಿಗೆ ಜಾತ್ರೆಗೆ ಮೆರವಣಿಗೆ ಮುಖಾಂತರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಹಾರೋಗೆರೆ ಮಹೇಶ್ ಊರಿನ ಗ್ರಾಮಸ್ಥರು ಅದ್ದೂರಿ ಸ್ವಾಗತಿಸಿ. ಬರಿ ಮಾಡಿಕೊಂಡು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ವೇಳೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಸೇರಿದಂತೆ ಜಿಲ್ಲೆಯ ಮಾಜಿ ಸಚಿವರು ಮಾಜಿ ಸಚಿವರು ಶಾಸಕರಿಗೆ ಧನ್ಯವಾದಗಳು ತಿಳಿಸಿ. ಸರ್ಕಾರಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಕಾಡುಗೊಲ್ಲ ಸಮುದಾಯದ ಜನರ ಸೇವೆ ಮಾಡುವೆ ಎಂದು ತಿಳಿಸಿದರು.
ನಂತರ ಗೊಲ್ಲರಟ್ಟಿಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ. ಪಾವಗಡ ತಾಲೂಕು ರಾಜ್ಯದ ಅನೇಕ ಗೊಲ್ಲರಹಟ್ಟಿಗಳಲ್ಲಿ ರಸ್ತೆ, ಬೀದಿ ದೀಪ, ಚರಂಡಿ,ವಸತಿ ಮೂಲ ಸೌಕರ್ಯಗಳಿಂದ ವಂಚಿತವಾದ ಗೊಲ್ಲರಹಟ್ಟಿಗಳಿಗೆ ಮೂಲ ಸೌಕರ್ಯ ಒದಗಿಸಲು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಅಲ್ಲದೆ ರಾಜ್ಯ ಸರ್ಕಾರ ಕಾಡುಗುಲ್ಲರ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸ್ವಾವಲಂಬಿ ಸಾರಥಿ, ನೇರ ಸಾಲ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಸಾಲ ಸೌಲಭ್ಯಕ್ಕಾಗಿ ಸಕಾಲದಲ್ಲಿ ಅರ್ಜಿಗಳನ್ನು ಸಲ್ಲಿಸಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಲರಾಮರೆಡ್ಡಿ, ಮೈಲಾರರೆಡ್ಡಿ, ಗಂಗಣ್ಣ ತರೂರು, ಉಗ್ರಪ್ಪ ಚಿಕ್ಕದಾಸರಹಳ್ಳಿ, ಹಿರೇಗೌಡದರು ಮೈಲನಹಟ್ಟಿ, ಗಂಗಾಧರ್, ನಾಗರಾಜು ಬಂದ್ಕುಂಟೆ , ರವಿಚೆಂದ್ರ ಗೊಲ್ಲರಹಳ್ಳಿ, ಗೌಡರಂಗಪ್ಪ, ಗ್ರಾಂ.ಪಂ. ಸದಸ್ಯರು. ಶಿವಕುಮಾರ್, ವಸಂತಮ್ಮ, ಹಾಗೂ ದೇವಸ್ಥಾನದ ಗೌಡರಾದ ಚಿಕ್ಕರಂಗಪ್ಪ, ಯಜಮಾನ, ಬೋರಪ್ಪ, ಈರಣ್ಣ, ಪೂಜಾರಿ ಈರಣ್ಣ, ಪೂಜಾರಿ ಸಿದ್ದಪ್ಪ, ತೇಜು ಯಾದವ್ ಸೇರಿದಂತೆ ಗ್ರಾಮದ ಹಿರಿಯರು, ಮತ್ತು ಕಾಡುಗೊಲ್ಲ ಸಮುದಾಯದ ಬಂಧುಗಳು ಭಾಗವಹಿಸಿದ್ದರು.
ವರದಿ: ಶಿವಾನಂದ




