Join The Telegram | Join The WhatsApp |
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ನೆಲಗದರನ ಹಳ್ಳಿ ನಿಸರ್ಗ ವಿದ್ಯಾ ವಾಹಿನಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿಸರ್ಗ ಕೆಂಪರಾಜು ನೇತೃತ್ವದಲ್ಲಿ ಆಯೋಜಿಸಿದ್ದ “ಕೋಟಿ ಕಂಠ ಗಾಯನ” ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರ ಎಂದೆ ಹೆಸರುವಾಸಿಯಾಗಿದ ಬಿಜೆಪಿ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎಸ್.ಮುನಿರಾಜು ರವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನ್ನಡ ಹಿರಿಯ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಿದರು.
ನಮ್ಮ ಕನ್ನಡ ಜಲ ನೆಲ ನಾಡು ನುಡಿಗೆ ಕೋಟ್ಯಾಂತರ ಕನ್ನಡ ಅಭಿಮಾನಿಗಳು ನಾಡಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದರು ಅಂತವರ ಜೀವನ ಚರಿತ್ರೆಯನ್ನು ಈಗಿನ ಪೀಳಿಗೆಗೆ ತಿಳಿಸಿ ಕೊಡುವ ಕೆಲಸ ಶಿಕ್ಷಕಿಯರು ಪೋಷಕರು ಮಾಡಬೇಕಾಗಿದೆ ಎಂದು ಬಿಜೆಪಿ ಮಾಜಿ ಶಾಸಕ ಎಸ್ ಮುನಿರಾಜು ಮಾತನಾಡಿದರು.
ಶಾಲಾ ಸಂಸ್ಥಾಪಕ ಅಧ್ಯಕ್ಷ ನಿಸರ್ಗ ಕೆಂಪರಾಜು ಸರ್ವರಿಗೂ ಸ್ವಾಗತಿಸಿದರು.
ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪೋಷಕರು ನಾಗರಿಕ ಬಂಧು ಭಗನಿಯರು ಕನ್ನಡ ಧ್ವಜವನ್ನು ಹಿಡಿದು ಕನ್ನಡದ ಆಯ್ದ ಗೀತೆಗಳನ್ನು ಹಾಡುವ ಮೂಲಕ ಕೋಟಿ ಕಂಠ ಗಾಯನಕ್ಕೆ ಧ್ವನಿ ಗೂಡಿಸಿದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎನ್.ಲೋಕೇಶ್, ಮಾಜಿ ಶಾಸಕ ಎಸ್ ಮುನಿರಾಜು ಅವರ ಧರ್ಮ ಪತ್ನಿ ಬಿಜೆಪಿ ಮುಖ್ಯಸ್ಥೆ ಶ್ರೀಮತಿ ಸುಜಾತ ಮುನಿರಾಜು, ಬಿಜೆಪಿ ಹಿರಿಯ ರಾಜಕಾರಣಿ ಜೆವಿಎಸ್ ಶ್ರೀನಿವಾಸ್, ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಎಚ್ ರಾಜು, ವಿನೋದ್ ಗೌಡ,ಡಾ.ನಾಗೇಶ್ ಕುಮಾರ್,ಕನ್ನಡ ಸಾಹಿತ್ಯ ಪರಿಷತ್ ಹಿರಿಯರ ಪ್ರತಿನಿಧಿ ಶ್ರೀನಿವಾಸ್, ನಿಸರ್ಗ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಪೋಷಕರು ವಿದ್ಯಾರ್ಥಿಗಳು ಮತ್ತು ಬಿಜೆಪಿ ಮುಖಂಡರು ಮಹಿಳೆಯರು ಹಾಗೂ ನೆಲಗದರನಹಳ್ಳಿ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್
Join The Telegram | Join The WhatsApp |