This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

74 ನೇ ಗಣರಾಜ್ಯೋತ್ಸವ  ಅಂಗವಾಗಿ ಡಾ. ರಾಜು ಕಿರಣಗಿ ಅವರ ಅಭಿಮಾನಿಗಳಿಂದ ರಾಯಬಾಗ ಮತಕ್ಷೇತ್ರದ ತೋರಣಹಳ್ಳಿ ಗ್ರಾಮದಲ್ಲಿ 2023 ನೇ ಸಾಲಿನ  ವರ್ಷದ ಕ್ಯಾಲೆಂಡರ ಬಿಡುಗಡೆ

Join The Telegram Join The WhatsApp

ರಾಯಬಾಗ:ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಿದರೆ. ಮನಸ್ಸಿಗೆ ಸಿಗುವ ಆನಂದವೇ ಬೇರೆ. ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ,. ಸಮಾಜ ಸೇವೆ ಒಂದು ಪುಣ್ಯದ ಕೆಲಸವಾಗಿದೆ. ತಮ್ಮ ಕೆಲಸದಲ್ಲಿ ಯಾರು ಅಪ್ರಾಮಾಣಿಕತೆಯಿಂದ ಇರುತ್ತಾರೆ ಅವರು ಎಷ್ಟೆ ಹಣ ಗಳಿಸಿದರೂ ಅವರಿಗೆ ನೆಮ್ಮದಿ ಬದುಕು ಇರುವುದಿಲ್ಲ. ಮಾನವ ಬದುಕಿದ್ದಾನೆ. ಮನುಷ್ಯತ್ವ ಸತ್ತಿದೆ ಅನ್ನೋ ಹಾಗೇ ಈಗಿನ ದುನಿಯಾ ಇರೋದು. ದುಡ್ಡಿದ್ರೆ ದುನಿಯಾ ಅಂತಾ ಅನ್ನೋರೇ ಹೆಚ್ಚಿರೋವಾಗ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಸಮಾಜ ಸೇವಾ ಮಾಡುವ ಯಾರು ಕೂಡ ಮುಂದೆ ಬರಲು ಹಿಂಜರಿಕೆಪಡುತ್ತಿದ್ದಾರೆ. ಕೆಲವರು ಅಧಿಕಾರ ಆಸೆಗಾಗಿ ಸಮಾಜ ಸೇವೆ ಮಾಡುವವರು ಒಂದು ಕಡೆಯಾದರೇ ಡಾ. ರಾಜು ಕಿರಣಗಿ ಇವರು ಸಮಾಜ ಸೇವನೇ ಮೈಗೂಡಿಸಿಕೊಂಡ ತಮ್ಮ ವಯಕ್ತಿಕ ಜೀವನದ ಆಸೆಯನ್ನು ಬೀಟು ಸಮಾಜ ಸೇವೆ ಅಂದ್ರೆ ಇವರಿಗೆ ಪಂಚಪ್ರಾಣವಾಗಿದೆಂದು ಸತ್ಯಪ್ಪಾ ಬಾನೆ ಹೇಳಿದರು.

ಅವರು ಓಂ ಸಾಯಿ ಶಿಕ್ಷಣ ಮತ್ತು ಸೇವಾ ಫೌಂಡೇಶನವತ್ತಿದ ಸಹಾಯ ಸಹಕಾರ ನೀಡಿ ಜನ ಮೆಚ್ಚುಗೆ ಪಡೆದ ಡಾ. ರಾಜು ಕಿರಣಗಿ ಅಭಿಮಾನಿಗಳಿಂದ 74 ನೇ ಗಣರಾಜ್ಯೋತ್ಸವ ಅಂಗವಾಗಿ ಡಾ. ರಾಜು ಕಿರಣಗಿ ಅವರ ಅಭಿಮಾನಿಗಳಿಂದ ರಾಯಬಾಗ ಮತಕ್ಷೇತ್ರದ ತೋರಣಹಳ್ಳಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ನೆರವೆರಿಸಿದರು. 2023 ನೇ ಸಾಲಿನ ವರ್ಷದ ಕ್ಯಾಲೆಂಡರ ಬಿಡುಗಡೆಯನ್ನು ಮಾಡಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಂತೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಅಪಾರ ಜಿವಹಾನಿ, ಆಸ್ತಿ ನಷ್ಟ ಇತ್ಯಾದಿ ಸಂಭವಿಸಿದಾಗ, ಅಂತಹ ನೂರಾರು ಕುಟುಂಬಗಳು ಬೀದಿಗೆ ಬಂದು ನೀತಾಗ ದಿನನಿತ್ಯದ ಸಾಮಗ್ರಿಗಳನ್ನು,ದಿನಸಿ ಕಿಟಗಳನ್ನು ,ಊಟವನ್ನು ಬಟ್ಟೆಗಳು ನೀಡಿ ಅವರುಗಳ ಕಷ್ಟದಲ್ಲಿ ಡಾ. ರಾಜು ಕಿರಣಗಿ ಬಾಗಿಯಾಗಿದ್ದರು. ಮತ್ತು 2019 ಇಡೀ ದೇಶದಲ್ಲೇ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಹಿನ್ನೆಲೆ ದೇಶವೆ ಲಾಕ್ ಡೌನ ಆದ ಸಂದರ್ಭದಲ್ಲಿ ದುಡ್ಡಿಯುವ ಕೈಗಳಿಗೆ ಯಾಗುವುದೇ ಕೇಲಸುಗಳು ಇಲ್ಲದೆ ಅವರುಗಳು ಒಂದು ತುತ್ತು ಅನ್ನಕಾಗಿ ಪರದಾಡುವುದನ್ನು ನೋಡಿ ಅತೀ ಕಡುಬಡವರಿಗೆ ಬೀದಿ ವ್ಯಾವಾರಸ್ಥರಿಗೆ ಹಾಗೂ ಅಲೆಮಾರಿ ಜಂನಾಗದವರಿಗೆ ಪ್ರತಿವಾರ ಅವರುಗಳಿಗೆ ದಿನಸಿ ಕಿಟ್ಟಗಳ ಹಾಗೂ ಪ್ರತಿದಿನ ಉಪಹಾರ ಊಟದ ಬ್ಯಾಕೇಟಗಳನ್ನು ಓಂ ಸಾಯಿ ಶಿಕ್ಷಣ ಮತ್ತು ಸೇವಾ ಫೌಂಡೇಶನವತ್ತಿದ ಮೂಲಕ ಹಸಿದ ಹೊಟ್ಟೆಗೆ ಆಶ್ರಯಾಗಿದವರು ಡಾ. ರಾಜು ಕಿರಣಗಿ ಅವರಿಗೆ ಮುಂಬರುವ ಭವಿಷ್ಯತ್ತಿನಲ್ಲಿ ಒಳ್ಳೆಯ ಸ್ಥಾನ ಲಭಿಸಲಿ ಎಂದು ಸತ್ಯಪ್ಪಾ ಬಾನೆ ಹೇಳಿದರು.

ಸಮಾಜದಲ್ಲಿ ಪ್ರತಿಯೊಬ್ಬರು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ನಿಮ್ಮ ನಿಸ್ವಾರ್ಥ ಸೇವೆಯಿಂದ ಈ ಸಮಾಜ ಪರಿವರ್ತನೆಯಾಗುವುದರಲ್ಲಿ ಯಾವ ಸಂದೇಹವಿಲ್ಲ. ಹಳ್ಳಿಗಳಲ್ಲಿ ವಾಸಿಸುವ ಜನರ ನೋವು-ನಲಿವುಗಳನ್ನು ಅರ್ಥ ಮಾಡಿಕೊಂಡು, ಜನಸೇವೆಯೇ ಜನಾರ್ದನನ ಸೇವೆ ಎಂಬ ಗಾದೆಯು ಸಮಾಜ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ಡಾ. ರಾಜು ಕಿರಣಗಿ ಇವರುಗಳು ಅರಿತುಕೊಂಡು ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಾರೆ. ಇವರ ಬದುಕು ಇನ್ನಷ್ಟು ಉಜ್ವಲವಾಗಲಿ ಅನ್ನೋದೆ ನಮ್ಮೆಲ್ಲರ ಆಶಯಾಗಿದೆಂದು ಅಶೋಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖು ಹಾಗೂ ಓಂ ಸಾಯಿ ಶಿಕ್ಷಣ ಮತ್ತು ಸೇವಾ ಫೌಂಡೇಶ ಪದಾಧಿಕಾರಿಗಳು ಮತ್ತು ಡಾ. ರಾಜು ಕಿರಣಗಿ ಅಭಿಮಾನಿ ಬಳದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:ರಂಜಾನ ಮುಲ್ಲಾ


Join The Telegram Join The WhatsApp
Bharath Vaibhav
the authorBharath Vaibhav

Leave a Reply