Join The Telegram | Join The WhatsApp |
ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಂಜೀವ್ ಪಾಟೀಲ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಥಣಿ ಉಪವಿಭಾಗದಲ್ಲಿ ಬರುವ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸಮಾಜಘಾತುಕ ಚಟುವಟಿಕೆ ಹಾಗೂ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಜನರನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಗಡಿಪಾರು ಮಾಡಲು, ಸಂಭಧಪಟ್ಟ ಪೊಲೀಸ್ ಅಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಿರುತ್ತಾರೆ ಎಂಬ ಮಾಹಿತಿ ನೀಡಿದರು..
ಅಥಣಿ ಉಪವಿಭಾಗದ ಸರಹದ್ದಿನಲ್ಲಿ ಬರುವ ಅಥಣಿ, ಐಗಳಿ, ಕಾಗವಾಡ, ಕುಡಚಿ ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜು, ಮಟ್ಕಾ, ಸಾರಾಯಿ, ಅಕ್ರಮ ಮರಳು ಸಾಗಣೆ, ಹೀಗೆ ನಾನಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಸುಮಾರು 12 ಜನ ಆಸಾಮಿಗಳನ್ನು ಗಡಿಪಾರು ಮಾಡಲು ವರದಿ ನೀಡಲಾಗಿದೆ.
ಮಿರಸಾಬ ಗಂಗಾರಾಮ ಬ್ಯಾಗಡಿ, ಮಟ್ಕಾ ಕೇಷಿನ್ ಮೇಲೆ ಒಂದು ತಿಂಗಳು ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡುವುದಾಗಿ, ಸದಾಶಿವ ಗೊಡಮಾಲೆ, ಮಟ್ಕಾ ಕೆಸ್ ಮೇಲೆ ಒಂದು ತಿಂಗಳು ಕೊಪ್ಪಳ ಜಿಲ್ಲೆಗೆ ಗಡಿಪಾರು,
ಮಹಾದೇವ ಕಾಂಬ್ಳೆ, ಮಟ್ಕಾ ಕೇಸ್ ಮೇಲೆ ಎರಡು ತಿಂಗಳು ವಿಜಯಪುರ ಜಿಲ್ಲೆಗೆ, ರವಿ ಸಿಂಗೆ ಸಾ ಕೋಹಳ್ಳಿ ಈತನನ್ನು ಎರಡು ತಿಂಗಳು ಕೊಪ್ಪಳ ಜಿಲ್ಲೆಗೆ, ಕಾಶಪ್ಪ ಕಾರಿಕೊಳ್ಳ, ಪ್ರದೀಪ ಕರಡಿ, ಬಾಬಾಸಾಬ್ ನದಾಫ, ಸಾಹೇಬ ಚಮನಮಲಿಕ್,ಲಕ್ಷ್ಮಣ ಪೊಳ್, ಅಲ್ತಾಫ್ ಮೇವೆಗಾರ, ಮುಂತಾದ ಆರೋಪಿಗಳನ್ನು ವಿವಿಧ ಆರೋಪದಡಿ ನಾನಾ ಜಿಲ್ಲೆಗಳಿಗೆ ಗಡಿಪಾರು ಮಾಡುವಂತೆ ವರದಿ ನೀಡಲಾಗಿದೆ ಇಂದು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |