Join The Telegram | Join The WhatsApp |
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 8 ಕೆಎಎಸ್ ಹಾಗೂ 39 ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯ ವಿಧಾನಸಭೆ 2023ರ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶದ ಹಿನ್ನಲೆಯಲ್ಲಿ 8 ಕೆಎಎಸ್ ಅಧಿಕಾರಿಗಳು, 39 ತಹಶೀಲ್ದಾರ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನ ಆಡಳಿತ ಮತ್ತು ಅಭಿವೃದ್ಧಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿದ್ದಂತ ಕೆಎಎಸ್ ಅಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರನ್ನು ಬಳ್ಳಾರಿಯ ಅಪರ ಜಿಲ್ಲಾ ದಂಡಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ.
ಪ್ರಭಾವತಿ ಫಕೀರಪೊರ ಅವರನ್ನು ಬೆಳಗಾವಿಯ ಬೈಲಹೊಂಗಲ ಉಪ ವಿಭಾಗದ ಉಪ ವಿಭಾಗಾಧಿಕಾರಿಯನ್ನಾಗಿ ನೇಮಿಸಿದೆ. ಸ್ಥಳ ನಿಯುಕ್ತಿಯಲ್ಲಿದ್ದಂತ ಬಿ.ಎ ಜಗದೀಶ್ ಅವರನ್ನು ಹಾಸನದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನಾಗಿ ಸೇರಿದಂತೆ 8 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ.ಇನ್ನೂ ಕಂದಾಯ ಇಲಾಖೆಯ ತಹಶೀಲ್ದಾರ್ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ 39 ತಹಶೀಲ್ದಾರ್ ವರ್ಗಾವಣೆಗೊಳಿಸಿದೆ.
ಮಲ್ಲಿಕಾರ್ಜುನ ಹೆಗ್ಗನ್ನವರ ಅವರನ್ನು ಗದಗ ತಾಲೂಕು ತಹಶೀಲ್ದಾರ್, ರವೀಂದ್ರ ಕರಘೋಳಪ್ಪ ಹಾದಿಮನಿ ಕಿತ್ತೂರು ತಾಲೂಕು ತಹಶೀಲ್ದಾರ್, ಮಹಾಂತಪ್ಪ ಮುಡಬಿ ಅವರನ್ನು ಕಲಬುರ್ಗಿಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಿಶೇಷ ತಹಶೀಲ್ದಾರ್ ಆಗಿ ನಿಯೋಜಿಸಿದೆ
Join The Telegram | Join The WhatsApp |