Join The Telegram | Join The WhatsApp |
ಇಳಕಲ್ : –ನಗರದ ಬಸವನಗರದಲ್ಲಿ ಪತ್ರಕರ್ತ ಜಾಕೀರಹುಸೇನ ತಾಳಿಕೋಟಿ ಅವರ ನಿವಾಸದಲ್ಲಿ ನಗರಾಭಿವೃದ್ಧಿ ಸಮಿತಿಯಿಂದ & ಪತ್ರಕರ್ತಮಿತ್ರರಿಂದ ಹೂನ್ನನುಡಿ ಕನ್ನಡ ದಿನಪತ್ರಿಕೆಯ ಮಾಧ್ಯಮ ಪೆಟ್ಟಿಗೆ ಸೇರ್ಪಡೆಗೊಂಡ ಪ್ರಯುಕ್ತ ಸಂಪಾದಕ ಜಾಕೀರಹುಸೇನ ತಾಳಿಕೋಟಿ ಅವರನ್ನು ವಿಜಯವಾಣಿ ಪತ್ರಿಕೆಯ ನೂತನ ವರದಿಗಾರನಾಗಿ ನೇಮಕಗೊಂಡ ಸಚಿನ ಸಾಲಿಮಠ ಹೂನ್ನನುಡಿ ಕನ್ನಡ ದಿನಪತ್ರಿಕೆಯ ಇಳಕಲ ತಾಲೂಕಿನ ವರದಿಗಾರನಾಗಿ ನೇಮಕಗೊಂಡ ಸೈಯದ್ ಸಿರಾಜ್ ಖಾಜಿ ಇವರನ್ನು ಇಳಕಲ್ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಎಲ್ ಬಿ ಅರಶಿದ್ದಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಸತ್ಕರಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಿ ಸಿ ಚಂದ್ರಾಪಟ್ಟಣ ಮಾತನಾಡಿ ಪತ್ರಕರ್ತರು ಜೀವನದಲ್ಲಿ ಬದ್ದತೆ ಯಿಂದ ಕೆಲಸ ನಿರ್ವಹಿಸಬೇಕು ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಇರುವ ಪತ್ರಕರ್ತರು ಈ ನಿಟ್ಟಿನಲ್ಲಿ ತಮ್ಮ ದೃಷ್ಟಿ ಇರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು
ಅತಿಥಿಗಳಾಗಿ ಸಮಾಜ ಸೇವಕರು ನಗರಸಭೆಯ ಮಾಜಿ ಸದಸ್ಯರಾದ ಮಹಾಂತಪ್ಪ ಚನ್ನಿ ನಿವೃತ್ತ ಸಾರಿಗೆ ನೌಕರರಾದ ಅಹಮ್ಮದಸಾಬ ಬಾಗವಾನ ಆಗಮಿಸಿದ್ದರು
ವರದಿ ದಾವಲ್. ಶೇಡಂ
Join The Telegram | Join The WhatsApp |