Join The Telegram | Join The WhatsApp |
ಹುಕ್ಕೇರಿ : ತಾಲೂಕಿನ ಸುಲ್ತಾನಪೂರ ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ 20/10/2022 ರಂದು ವಾಣಿಜ್ಯ ಮಳಿಗೆಗಳ ಹರಾಜು ಟೆಂಡರ್ ಪ್ರತಿಕ್ರಿಯೆ ಸಭೆ ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಮಹಿಳಾ ಸದಸ್ಯರಿಲ್ಲದೆ ವಾಣಿಜ್ಯ ಮಳಿಗೆಗಳ ಹರಾಜು ಟೆಂಡರ್ ಪ್ರತಿಕ್ರಿಯೆ ನಡೆಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮತ್ತು ಮಹಿಳಾ ಪ್ರತಿನಿಧಿಯ ಪತಿರಾಯರ ಹಸ್ತಕ್ಷೇಪ ಮಾಡುವಂತಿಲ್ಲ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ.ಮತ್ತು ಟೆಂಡರ್ ಕರೆಯುವ ಮುಂಚೆ ಮಳಿಗೆಗಳನ್ನು ಏಳು ದಿನಗಳ ಒಳಗಾಗಿ ಖಾಲಿ ಮಾಡಿರಬೇಕು ಎಂದು ಕಾಟಾಚಾರದ ನೋಟಿಸ್ ನೀಡಲಾಗಿದೆ.ಯಾವುದೇ ಮಳಿಗೆಗಳನ್ನು ಖಾಲಿ ಮಾಡಿದೆ ಟೆಂಡರ್ ಪ್ರತಿಕ್ರಿಯೆ ಸಭೆ ನಡೆಯಿತು.ಆ ವೇಳೆ ಪತ್ರಕಾರರು ಪ್ರಶ್ನೆ ಮಾಡಿದಾಗ ಪಿಡಿಓ ಗೆ ಉತ್ತರಿಸಲು ಗಲಿಬಿಲಿ ಗೊಂಡು ನಂತರ ಈ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತರು.
ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು ಆದರೂ ಕೂಡ ಹುಕ್ಕೇರಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ ಕಾರಣ ಸೋಮವಾರ ದಿನ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಎಲ್ಲಾ ಸದಸ್ಯರು ಸೇರಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಉಮೇಶ ಸಿದ್ನಾಳ ಇವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ ಚೌಗಲಾ ಸುಲ್ತಾನಪೂರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ತುಂಬಾ ರೀತಿಯ ಮೋಸದ ವ್ಯವಹಾರಗಳು ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ನಮ್ಮ ಮನವಿ ಸ್ವೀಕರಿಸಿದ ಉಮೇಶ ಸಿದ್ನಾಳ ಇವರು ಯಾವ ರೀತಿ ಕಾನೂನು ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕಾಗಿದೆ ಒಂದು ವೇಳೆ ಇವರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಗೌರವ ಅಧ್ಯಕ್ಷರಾದ ರವಿ ಬಿ ಕಾಂಬಳೆ.ಸುರೇಶ ಢಂಗಿ.ಸಂಜೀವ ಕಟ್ಟಿಮನಿ.ಪ್ರಶಾಂತ ನಾಗನೂರಿ.ದಯಾನಂದ ಮಾಂಜರೇಕರ.ಶ್ರೀಕಾಂತ ಅಸೋದೆ.ಕಿಶೋರ ಮಾಯನ್ನವರ.ಲಕ್ಷ್ಮಣ ಬಾಮನೆ.ವಿಷ್ಟು ದರಬಾರೆ.ಕುಮಾರ ಹರಿಜನ.ದರೇಪ್ಪಾ ಅಂತರಗಟ್ಟಿ.ಮಲ್ಲಪ್ಪಾ ಕೋಳಿ.ಕೆಂಪ್ಪಣಾ ಚೌಗಲಾ ಮುಂತಾದವರು ಉಪಸ್ಥಿತರಿದ್ದರು.
ವರದಿ -ರವಿ ಬಿ ಕಾಂಬಳೆ
Join The Telegram | Join The WhatsApp |