Join The Telegram | Join The WhatsApp |
ಬೆಂಗಳೂರು : ಅದೃಷ್ಟವೊಂದು ಜೊತೆಗಿದ್ದರೆ ಇಂದು ಆಳಾಗಿರುವವನು ಅರಸನಾಗುತ್ತಾನೆ . ಅಂತಹ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತಹವರ ಸಾಲಿನಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಪಕರ ಸಾಲಿನಲ್ಲಿ ಹರಿಚೇತ್ ಕೂಡ ಸೇರಿದ್ದಾರೆ ಎಂದರೆ ತಪ್ಪಾಗಲಾರದು. ಹಿರಿಯ ನಿರ್ದೇಶಕ ದೊರೆ ಭಗವಾನರ ಗರಡಿಯಲ್ಲಿ ತರಬೇತಿ ಪಡೆದು ಅವರ ಕೈಯಿಂದಲೇ ಮೊದಲ ಮಿಡಿತ ಸಿನಿಮಾದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಮಾಡಿಸಿದ ಕೀರ್ತಿ ಮೊದಲ ಮಿಡಿತ ಚಿತ್ರತಂಡಕ್ಕೆ ಸಲ್ಲುತ್ತದೆ. ಚಾಮರಾಜಪೇಟೆಯ ವಿ ಆರ್ ಎಲ್ ಸಮೂಹ ಗ್ರೂಪ್ಗಳ ಆವರಣದ ಅಂಬರೀಶ್ ಆಡಿಟೋರಿಯಂ ಸಭಾಂಗಣದಲ್ಲಿ ಧ್ವನಿಸುರಳಿ ಹಾಗೂ ಟ್ರೈಲರ್ ಬಿಡುಗಡೆ ಮಾಡಿದರು . ಈ ಸಿನಿಮಾಕ್ಕೆ ನಿಮಿಷ ಸಾಗರ್ ನಟನಾಗಿ ರಶ್ಮಿತಾ ರೋಜಾ ನಟಿಯಾಗಿ ದಶಕಗಳ ಹಿಂದೆ ಮುಂಗಾರು ಮಳೆ ಚಿತ್ರದ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದ್ದು ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೃಷ್ಣಪ್ಪ ಗಂಡಸಂದ್ರ , ಘಟ್ಟಹಳ್ಳಿ ವಿಶ್ವನಾಥ್ ಹಾಗೂ ರೇಣುಕಾ ಮೂರ್ತಿ ಸಾಕಾರದೊಂದಿಗೆ ಉಮೇಶ್ ಬಣಕಲ್ ಪಿ ಆರ್ ಓ ನಾಗೇಂದ್ರ ಸಹನಿರ್ಮಾಪಕರಾಗಿ ಎಂ ಕುಮಾರ್ ಕಲಾಪೋಷಕರಲ್ಲಿ ಟಿ ಎಸ್ ನಾಗಾಭರಣ, ತಬಲಾ ನಾಣಿ,ಕೆಂಪೇಗೌಡ, ಶಿವಪ್ರಕಾಶ್, ಭಾಸ್ಕರ್ ಶೆಟ್ರು , ಜೈ, ಕಿಲ್ಲರ್ ವೆಂಕಟೇಶ್ ಸಾಹಸ ನಿರ್ದೇಶಕರಾಗಿ ಜಾಗ್ವಾರ್ ಸಣ್ಣಪ್ಪ, ನಾಗೇಂದ್ರ ಇನ್ನು ಹಲವಾರು ಕಲಾವಿದರೆಗಳಿಂದ ಈ ಸಿನಿಮಾವು ಕೌಟುಂಬಿಕ ಚಿತ್ರ ಹಾಗೂ ಲವ್ ಶೀನ ಗಳಿಂದ ಹಾಗೂ ಕಾಲೇಜಿನ ಜೀವನ ಅದರ ಜೊತೆಗೆ ಫೈಟ್ ಗಳಿಗೆ ಏನು ಕಮ್ಮಿ ಇಲ್ಲ ಎನ್ನುವ ಹಾಗೆ ಚಿತ್ರ ಮೂಡಿ ಬಂದಿದೆ. ಮುಂಗಾರು ಮಳೆಯ ಹಾಡಿನ ಸ್ಟೈಲ್ ನಲ್ಲಿ ಹಾಡು ಕೂಡ ಚಿಕ್ಕಮಂಗಳೂರು ಕಾಫಿ ಎಸ್ಟೇಟ್ ನಲ್ಲಿ ಚಿತ್ರದ ಶೂಟಿಂಗ್ ಕೂಡ ಮಾಡಲಾಗಿದ್ದು ಮುಂದಿನ ಡಿಸೆಂಬರ್ ತಿಂಗಳಲ್ಲಿ ಹಲವಾರು ಚಿತ್ರ ಮಂದಿರಗಳಲ್ಲಿ ತೆರೆ ಕಾಣುವುದಕ್ಕೆ ಸಜ್ಜಾಗಿ ನಿಂತಿದೆ. ಇದೇ ಸಂದರ್ಭದಲ್ಲಿ ಹೆಗ್ಗನಹಳ್ಳಿ ಬಿಜೆಪಿ ಜಿಲ್ಲಾ ಅಹಿಂದ ಮುಖಂಡ ರಂಗಸ್ವಾಮಿ , ಮಂಜಣ್ಣ, ಕಿರಣ್ ಕೃಷ್ಣಮೂರ್ತಿ, ಬಿಬಿಎಂಪಿ ನ್ಯೂಸ್ ನ ಎ ಎಚ್ ಆನಂದ್ , ರಮೇಶ್ ಇನ್ನಿತರ ಕಲಾವಿದರು , ಚಿತ್ರತಂಡದ ಪೋಷಕ ನಟ ನಟಿಯರು ಸಿನಿಮಾದ ತಾಂತ್ರಿಕ ಬಳಗದವರು ನಾಗರಿಕರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್
Join The Telegram | Join The WhatsApp |