Join The Telegram | Join The WhatsApp |
ಧ್ವನಿ ಮುದ್ರಣದ ಯುಟ್ಯೂಬ್ ಚನಲ್ ಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, https://www.youtube.com/@108vidyabhushanmunirajjain4/videos
ಅಥಣಿ: 253 ಭಾಗಗಳಲ್ಲಿ ತತ್ತ್ವಾರ್ಥಸೂತ್ರದ ಧ್ವನಿ ಮುದ್ರಣ ಬಿಡುಗಡೆ ಮತ್ತು ಪಿಂಚಿ ಪರಿವರ್ತನೆ ಕಾರ್ಯಕ್ರಮ ಭಾನುವಾರ ತಾಲ್ಲೂಕಿನ ಕರ್ಲಟ್ಟಿ ಗ್ರಾಮದಲ್ಲಿ ಜರುಗಿತು.
ಬೆಳಿಗ್ಗೆ ಮಲ್ಲಿನಾಥ ಭಗವಾನರ ಪೂಜೆಯೊಂದಿಗೆ ಪರಂ ಪೂಜ್ಯ ವಿದ್ಯಾ ಭೂಷಣ ಮಹಾರಾಜರ ನೇತೃತ್ವದಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ತತ್ತ್ವಾರ್ಥಸೂತ್ರದ ಧ್ವನಿ ಮುದ್ರಣಗಳನ್ನು ವಿದ್ಯಾ ಭೂಷಣ ಮನಿ ಮಹಾರಾಜರ, ಹಾಗೂ ಶ್ರಾವಕ ಶ್ರಾವಕಿಯರ ಸಮ್ಮುಖದಲ್ಲಿ ಬಿಡುಗೆಡ ಮಾಡಲಾಯಿತು.
ತತ್ತ್ವಾರ್ಥಸೂತ್ರದ ಧ್ವನಿ ಮುದ್ರಣಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪ.ಪೂ. ವಿದ್ಯಾ ಭೂಷಣ ಮನಿ ಮಹಾರಾಜರು ಮಾತನಾಡಿ, ತತ್ತ್ವಾರ್ಥಸೂತ್ರದ ಜೈನ್ ಧರ್ಮದ ಇತಿಹಾಸವನ್ನು ತಿಳಿಸುತ್ತದೆ. 2523 ಪ್ರಶ್ನೋತ್ತರಗಳ ಮೂಲಕ 253 ಭಾಗಗಳಲ್ಲಿ ಬಿಡುಗಡೆ ಮಾಡಲಾಗಿದೆ, 108 vidyabhushan muniraj jainism ಎಂಬ ಯೂಟ್ಯೂಬ್ ಚನಲ್ ನಲ್ಲಿ ಧ್ವನಿ ಮುದ್ರಣಗಳು ಲಭ್ಯ ಇವೆ, ಜೈನ ಧರ್ಮದ ಇತಿಹಾಸವನ್ನು ತಿಳಿಯಲು ಈ ಧ್ವನಿ ಮುದ್ರಣಗಳನ್ನು ಕೆಳಿ ತಿಳಿಯಿರಿ ಸಲಹೆ ನೀಡಿದರು.
ನರಸಿಂಹರಾಜಪುರದ ಪ.ಪೂ ಸ್ವಸ್ತಿ ಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ ಪಿಂಚಿಯನ್ನು ಮುನಿಗಳು ಯಾವುದೇ ಜೀವಹಾನಿ ಆಗದಂತೆ ನೋಡಿಕೊಳ್ಳಲು ಬಳಸಲಾಗುತ್ತದೆ. ಕೆಲವು ದಿನ ಪಿಂಚಿಯನ್ನು ಬಳಸಿದ ನಂತರ ಅದರ ಮೃದುತ್ವ ಕಡಿಮೆಯಾಗುತ್ತದೆ. ಅದಕಾರಣ ಪಿಂಚಿಯನ್ನು ಪರಿವರ್ತನೆ ಮಾಡಬೇಕಾಗುತ್ತದೆ ಎಂದು ಪಿಂಚಿಯ ಮಹತ್ವ ಮತ್ತು ಪರಿವರ್ತನೆ ಕುರಿತು ತಿಳಿಸಿ ಆಶೀರ್ವಚನ ನೀಡಿದರು.
ನಂತರ ವಿದ್ಯಾ ಭೂಷಣ ಮುನಿ ಮಹಾರಾಜರ ಪಿಂಚಿ ಪರಿವರ್ತನೆ ಕಾರ್ಯಕ್ರಮ ನೆರವೇರಿತು.
ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ, ನಮ್ಮ ದೇಶ ಸಾದು ಸಂತರು ಮುನಿಗಳು ಇರುವಂತಹ ನಾಡು, ಮುನಿಗಳ ಭಟ್ಟಾರಕರ ಆಗಮನದಿಂದ ನಮ್ಮ ಸಮಾಜ ಅಭಿವೃದ್ಧಿಯಾಗುತ್ತದೆ. ನಮ್ಮ ಭೂಮಿ ಪುಣ್ಯ ಭೂಮಿ ಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮುಖಂಡರು ಭಾಗಿಯಾಗಿದ್ದರು.
Join The Telegram | Join The WhatsApp |