Join The Telegram | Join The WhatsApp |
ಸಿರುಗುಪ್ಪ : ನಗರದ ತಾ.ಪಂ. ಕಛೇರಿಯ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಎಂ ಎಸ್ ಸೋಮಲಿಂಗಪ್ಪ ನಂತರ ಮಾತನಾಡಿ
ಸಮಾಜದಲ್ಲಿನ ತಳಮಟ್ಟದ ಸಮುದಾಯಗಳನ್ನು ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲೀಕರಣ ಮಾಡಲೆಂದು 1991ರಲ್ಲಿ ಗಿರಿಜನ, ಆದಿವಾಸಿ, ಬೇಡ, ಮೀಸಲಾತಿ ಹೆಚ್ಚಿಸುವಂತೆ ನಾಯಕರೆಂದು ಕರೆಯುವ ವಾಲ್ಮೀಕಿ ಜನಾಂಗಕ್ಕೆ ಜನಾಸಂಖ್ಯಾನುಗುಣವಾಗಿ ಕೇಂದ್ರ ಸರ್ಕಾರವು ಶೇ.7ರಷ್ಟು ಮೀಸಲಾತಿಯನ್ನು, ರಾಜ್ಯ ಸರ್ಕಾರವು ಶೇ.3.5 ಮೀಸಲಾತಿಯನ್ನು ಕಲ್ಪಿಸಲಾಗಿತ್ತು.
ಕಾಲಾನಂತರ ಜನಸಂಖ್ಯೆಯ ಹೆಚ್ಚಳದಿಂದಾಗಿ ಕೇಂದ್ರದ ಮಾದರಿಯಲ್ಲಿ ರಾಜ್ಯದಲ್ಲೂ ಮೀಸಲಾತಿ ನೀಡಬೇಕೆಂದು ಹೋರಾಟಗಳು ನಡೆದಿದ್ದರಿಂದ ಪ್ರಾಥಮಿಕವಾಗಿ ಪಕ್ಷದ ಕೋರ್‌ಕಮಿಟಿ ಸಭೆ ನಡೆಸಿ ಮೀಸಲಾತಿ ಹೆಚ್ಚಳದ ಬಗ್ಗೆ ತೀರ್ಮಾನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸುವುದರೊಂದಿಗೆ ಪರಿಶಿಷ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ದೊರೆಕಿಸಿದ್ದಾರೆಂದರು.
ಇದೇ ವೇಳೆ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಕಲ್ಯಾಣಾಧಿಕಾರಿ ರಾಘವೇಂಹಾಗೂ ಇನ್ನಿತರರು ಇದ್ದರು.
ವರದಿ .ಶ್ರೀನಿವಾಸ ನಾಯ್ಕ
Join The Telegram | Join The WhatsApp |