Join The Telegram | Join The WhatsApp |
ಬಾದಾಮಿ :ನವಶಕ್ತೀ ಪೀಠಗಳಲ್ಲಿ ಒಂದಾದ ಶಕ್ತಿ ದೇವತೆ ಜಗನ್ಮಾತೆ ಆದಿಶಕ್ತಿ ಶಂಖಂಭರಿ ಬಾದಾಮಿ ಶ್ರೀ ಬನಶಂಕರಿ ದೇವಿಯ ಇತಿಹಾಸ ಪ್ರಸಿದ್ಧ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. 2023 ಜನವರಿ 6 ನೇ ತಾರೀಖಿ ನಂದು ಪ್ರಾರಂಭವಾಗುವ ಜಾತ್ರೆಗೆ ಲಕ್ಷಾಂತರ ಜನ ಬರುತ್ತಾರೆ. ಒಂದು ತಿಂಗಳ ಕಾಲ ಜರುಗುವ ಜಾತ್ರೆಗೆ ನಾಟಕಗಳು ಸಿನಿಮಾ ಟೂರಿಂಗ್ ಟಾಕೀಸ್ ಗಳು ಈಗಾಗಲೇ ಬೀಡು ಬಿಟ್ಟಿವೆ.ಹಾಗಾಗಿ ಆರೋಗ್ಯ ಸಚಿವ ಸುಧಾಕರ್ ಈಗಾಗಲೇ ಹೇಳಿಕೆ ಕೋವಿಡ ಮುನ್ನೆಚ್ಚರಿಕೆ ಬಗ್ಗೆ ತಿಳಿಸಿರುವಂತೆ,, ಕರೋನಾ ಮಹಾಮರಿಯ ಆರ್ಭಟ ಶುರುವಾಗಿರುವ ಹಿನ್ನೆಲೆಯಲ್ಲಿ ಜಾತ್ರೆಗೆ ಕೋವಿಡನ ಕರೋನ ಮುನ್ನೆಚ್ಚರಿಕೆಯಾಗಿ ಬಾದಾಮಿ ತಾಲೂಕಾ ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ. ಬಿ.ಪಾಟೀಲ್ ನೇತೃತ್ವದಲ್ಲಿ ಇಂದು ಮಾಧ್ಯಮ ಜೊತೆ ಮಾತನಾಡಿ ಜಾತ್ರೆಯಲ್ಲಿ ಕೋವಿಡ ಮುನ್ನೆಚ್ಚರಿಕೆಗಾಗಿ ಮಾಸ್ಕ್ ಹಾಗೂ ಸಾಮಾಜಿಕ ಅನಂತರ ಹಾಗೂ ಮೂರನೇ ಡೋಸ್ ಲಸಿಕೆ ಕಡ್ಡಾಯ ಸೇರಿದಂತೆ ಯಾವ ರೀತಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಹಾಗೂ ಯಾವ ರೀತಿ ಆರೋಗ್ಯ ಇಲಾಖೆಯಿಂದ ಪೂರ್ವ ಸಿದ್ಧತೆ ತಯಾರಿ ನಡೆಸಿರುವುದರ ಬಗ್ಗೆ ವಿವರಣೆಯನ್ನು ಮಾಧ್ಯಮದ ಎದುರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ. ಬಿ.ಪಾಟೀಲ, ಆರೋಗ್ಯ ನಿರೀಕ್ಷನಾಧಿಕಾರಿಗಳಾದ ಪಿ. ಎಚ್.ಮಹಾಲಿಂಗಪೂರ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ವಿ.ಜೋಶಿ,,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಡಿ.ಈ.ಅರವಟಗಿ,,ಕಾರ್ಯಕ್ರಮ ವ್ಯವಸ್ಥಾಪಕರಾದ ಬಿ. ಬಿ. ದೂತ,,ಲೆಕ್ಕ ವ್ಯವಸ್ಥಾಪಕರಾದ ಎನ್.ಸಿ.ನಾಮದಾರ ಉಪಸ್ಥಿತರಿದ್ದರು.
ವರದಿ: ಕೆ. ಎಚ್.ಶಾಂತಗೇರಿ
Join The Telegram | Join The WhatsApp |