Join The Telegram | Join The WhatsApp |
ಬೆಳಗಾವಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಆಂಬ್ಯುಲೆನ್ಸ್ ಭೀಕರ ಅಪಘಾತಕ್ಕೀಡಾಗಿದ್ದು, ಆಂಬುಲೆನ್ಸ್ ನಲ್ಲಿದ್ದ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಬಳಿ ನಡೆದಿದೆ
ಆಂಬುಲೆನ್ಸ್ ನಲ್ಲಿದ್ದ ಗಾಯಾಳು 28 ವರ್ಷದ ಅಕ್ಬರಸಾಬ್ ನೇಸರಗಿ ಮೃತ ದುರ್ದೈವಿ. ಸವದತ್ತಿ ಬಳಿ ಬೈಕ್ಸ್ ಸ್ಕಿಡ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅಕ್ಬರ್ ಸಾಬ್ ನನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿತ್ತು
ಈ ವೇಳೆ ಆಂಬುಲೆನ್ಸ್ ಟ್ರ್ಯಾಕ್ಟರ್ ಗೆಡಿಕ್ಕಿಹೊಡೆದು ಅಪಘಾತಕ್ಕೀಡಾಗಿದ್ದು, ಅಕ್ಬರ್ ಸಾಬ್ ಆಂಬುಲೆನ್ಸ್ ನಲ್ಲೇ ಸಾವನ್ನಪ್ಪಿದ್ದಾರೆ
ಅಪಘಾತದಲ್ಲಿ ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. …
Join The Telegram | Join The WhatsApp |