Join The Telegram | Join The WhatsApp |
ಬೆಳಗಾವಿ: ರಾಮದುರ್ಗದ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಬಾರ್ ಅಸೊಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ವಿಧಾನಸಭೆ ಸಭಾಪತಿಗೆ. ಮನವಿ ಸಲ್ಲಿಸಲಾಯಿತು.
ಈ ವೇಳ ಬಾರ್ ಅಸೊಸಿಯೇಷನ್ ಜಿಲ್ಲಾಧ್ಯಕ್ಷ ಪ್ರಭು ಯತ್ನಟ್ಟಿ ಮಾತನಾಡಿ, ರಾಮದುರ್ಗ ತಾಲೂಕಿನ ಬಟಕುರಕಿ ಗ್ರಾಮದ ಬಳಿ ಸಾಲಾಪೂರ ಎತ ನೀರಾವರಿ ಕಾಲುವೆಯ ಭೂಮಿ ಪೂಜೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ವಕೀಲ ಸಮುದಾಯದ ಘನತೆಗೆ ಕಳಂಕ ತರುವ ರೀತಿಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾತನಾಡಿದ್ದು ಇಡೀ ವಕೀಲರಿಗೆ ಮಾಡಿದ ಅಪಮಾನವಾಗಿದೆ. ತಕ್ಷಣವೇ
ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಹಾದೇವಪ್ಪ ಯಾದವಾಡ ಅವರು ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದಾರೆ. ವಕೀಲರ ವಿರುದ್ಧ ನೀಡಿರುವ ಹೇಳಿಕೆ ಸಂಜಸವಲ್ಲ ಕೂಡಲೇ ಅವರ ಶಾಸಕ ಸದಸ್ಯತ್ವ ರದ್ದುಗೊಳಿಸಬೇಕೆಂದು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಕೀಲಕರ ಸಂಘದ ಸಚೀನ ಶಿವಣ್ಣವರ, ಸುದೀರ ಚವ್ಹಾಣ, ಗಿರಿರಾಜ ಪಾಟೀಲ, ಎಂ.ಟಿ.ಪಾಟೀಲ ಸೇರಿದಂತೆ ಇನ್ನಿತರ ವಕೀಲರು ಭಾಗವಹಿಸಿದ್ದರು.
Join The Telegram | Join The WhatsApp |