ಸುಲ್ತಾನ್ ಪುರ ಕನಕ ವೃತ್ತ ಮುಖ್ಯ ರಸ್ತೆಯಿಂದ ಮರಡಿ ಗಂಗಾಧರ ತಾತನವರ ಸನ್ನಿಧಾನದವರೆಗೆ ಒಂದು ಕೋಟಿ 75 ಲಕ್ಷ ಸಿಸಿ ರಸ್ತೆಗೆ ಬಸನಗೌಡ ದದ್ದಲ್ ಚಾಲನೆ
ರಾಯಚೂರು: ಗ್ರಾಮಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಲ್ತಾನಪೂರ ಗ್ರಾಮದಲ್ಲಿ ಪವಿತ್ರ ಸ್ಥಳವಾದ ಶ್ರೀ ಮರಡಿ ಗಂಗಾಧರ ತಾತನವರ ಸನ್ನಿದಾನದಲ್ಲಿ ಜನಪ್ರಿಯ ಶಾಸಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃಧಿ ನಿಗಮದ ಅಧ್ಯಕ್ಷರಾದ ಶ್ರೀ ಬಸನಗೌಡ ದದ್ದಲ್ ರವರು ಆರ್ಶಿವಾದವನ್ನು ಪಡೆದರು.
ಕನಕದಾಸರ ವೃತ ಮುಖ್ಯ ರಸ್ತೆಯಿಂದ- ಮರಡಿ ಗಂಗಾಧರ ದೇವಸ್ಥಾನದ ವರೆಗೆ 1ಕೋಟಿ 75ಲಕ್ಷ ರೂ ವೆಚ್ಚದಡಿಯಲ್ಲಿ CC ರಸ್ತೆ ನಿರ್ಮಾಣ ಕಾಮಗಾರಿಗೆ ಮಾನ್ಯ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಭೂಮಿ ಫೂಜೆ ನೆರೆವೆರಿಸಿದರು.
ಈ ಸಂಧರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ನಾಮನಿರ್ದೆಶನ ಸದಸ್ಯರುಗಳು, ಅಧಿಕಾರಿಗಳು ಗ್ರಾ. ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ