ರಾಯಚೂರು:- ನಗರದಲ್ಲಿ ಇಂದು ವೀರಶೈವ ಕಲ್ಯಾಣ ಮಂಟಪದಲ್ಲಿ ಮಾದಿಗ ಸಮುದಾಯದವರೊಂದಿಗೆ ಸನ್ಮಾನ ಕಾರ್ಯಕ್ರಮ ದೊಂದಿಗೆ ಮಾದಿಗ ಸಮುದಾಯದ ಪ್ರತಿಯೊಬ್ಬರು ತಮ್ಮ ಮಕ್ಕಳು ಶಿಕ್ಷಣ ಪಡೆದು ಅಧಿಕಾರಿಗಳಾಗಬೇಕು ಸಮಾಜ ಅಭಿವೃದ್ಧಿಗೆ ಸರಕಾರಾದ ಯೋಜನೆಗಳು ಹಾಗೂ ರಾಜಕೀಯ ಪ್ರಾತಿನಿಧ್ಯ ಒದಗಿಸಿಕೊಡಲು ಪ್ರಾಮಾಣಿಕ ಕೆಲಸ ಮಾಡುವದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷವು ದೇಶದ ಇಂದಿರಾಗಾಂಧಿ ಅವರ ಕಾಲದಿಂದಲೂ ಹಿಡಿದು ಇಲ್ಲಿಯವರೆಗೆ ಅನೇಕ ಯೋಜನೆಗಳನ್ನು ನೀಡಿದೆ ನರೇಗಾ ಯೋಜನೆಯಿಂದ ಪ್ರತಿಯೊಬ್ಬರಿಗೆ ಇದ್ದಲ್ಲೆ ಕೆಲಸ ನೀಡಿದೆ.
ಜೊತೆಗೆ ಸಾಕಷ್ಟು ಜನಪ್ರಿಯ ಯೋಜನೆಗಳು ನೀಡಿದೆ ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನೀಡಿದ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ ಪರಿಶಿಷ್ಟ ಜಾತಿಯಲ್ಲಿ101 ಜಾತಿಗಳಿದ್ದು ಗ್ರಾಮೀಣ ಭಾಗದಲ್ಲಿ 35 ಸಾವಿರಕ್ಕೂ ಬಹು ಸಂಖ್ಯಾತರಿದ್ದಾರೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರದ ಮಾದಿಗ ಸಮುದಾಯದ ಎಲ್ಲಾ ಸಂಘಟನೆ ಮತ್ತು ಕಾರ್ಯಕರ್ತರು ಮಾದಿಗ ಸಮುದಾಯದ ಮುಖಂಡರು ಹಿರಿಯರು ಉಪಸ್ಥಿತರಿದ್ದರು
ವರದಿಗಾರರು:- ಗಾರಲದಿನ್ನಿ ವೀರನಗೌಡ