Join The Telegram | Join The WhatsApp |
ಬೆಂಗಳೂರು, ; ಕನ್ನಡ ನಟ, ಅಭಿಮಾನಿಗಳಪಾಲಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಮನೆ ನವೀಕರಣ ಮಾಡಲಾಗಿದೆ. ಮನೆಯ ಗೃಹ ಪ್ರವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.ಬೆಂಗಳೂರಿನ ಜಯನಗರದಲ್ಲಿರುವ ವಿಷ್ಣುವರ್ಧನ್ ನೂತನ ನಿವಾಸಕ್ಕೆ ‘ವಲ್ಮೀಕ’ ಎಂದು ನಾಮಕರಣ ಮಾಡಲಾಗಿದೆ.ಮನೆಯ ಗೇಟ್‌ಗೆ ಸಿಂಹದ ಮುಖ ಹೊಂದಿರುವ ಲಾಂಚನ ಹಾಕಲಾಗಿದೆ.
ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಮನೆಗೆ ಭೇಟಿ ನೀಡಿದರು. ಮನೆಯನ್ನು ವೀಕ್ಷಣೆ ಮಾಡಿದರು. ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಜೊತೆ ಮಾತುಕತೆ ನಡೆಸಿ, ಶುಭ ಹಾರೈಸಿದರು.ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ವಿಷ್ಣುವರ್ಧನ್ ಒಬ್ಬ ಮೇರು ನಟರಾಗಿದ್ದರು. ಭಾರತಿ ವಿಷ್ಣುವರ್ಧನ್ ತುಂಬಾ ಕಷ್ಟಪಟ್ಟು ಮನೆ ನಿರ್ಮಾಣ ಮಾಡಿದ್ದಾರೆ” ಎಂದರು. “ಮನೆಯನ್ನು ತುಂಬಾ ಚೆನ್ನಾಗಿ ನಿರ್ಮಾಣ ಮಾಡಲಾಗಿದೆ. ಮೈಸೂರಿನಲ್ಲಿ ದಿ. ನಟ ವಿಷ್ಣುವರ್ಧನ್ ಅವರ ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಮಾಡುತ್ತೇವೆ” ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು
Join The Telegram | Join The WhatsApp |