Join The Telegram | Join The WhatsApp |
ಬೆಳಗಾವಿ: ನಗರದ ಅಬಕಾರಿ ಆಯುಕ್ತರ ಮುಂದಾಳತ್ವದಲ್ಲಿ, ಬೆಳಗಾವಿ ವಿಭಾಗದಲ್ಲಿ ಮೂರು ದಿನಗಳ ಕಾಲ ನಡೆಯುವಂತ ಅಬಕಾರಿ ಕ್ರೀಡಾಕೂಟಗಳನ್ನು ಶುಕ್ರವಾರ ದಿನಾಂಕ 11ರಂದು ಉದ್ಘಾಟನೆ ಮಾಡಿ ಚಾಲನೆ ನೀಡಲಾಯಿತು.
ಕರ್ನಾಟಕ ಸರ್ಕಾರದ ಅಬಕಾರಿ ಅಪರ ಆಯುಕ್ತರಾದ ಶೇಖ್ ತನ್ವೀರ್ ಆಶೀಫ್, ಅವರು ಉದ್ಘಾಟನೆ ಮಾಡಿ, ಕ್ರೀಡಾಕೂಟಗಳಿಗೆ ಚಾಲನೆ ನೀಡಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯಮಾನ್ಯರು ಉದ್ಘಾಟನೆಗೆ ಸಾಕ್ಷಿಯಾದರು..
ದಿನಾಂಕ ,11,12,13ರಂದು ಮೂರು ದಿನಗಳು ಈ ಕ್ರೀಡಾಕೂಟ ನಡೆಯಲಿದ್ದು, ಬೆಳಗಾವಿ, ಹೊಸಪೇಟೆ, ಮತ್ತು ಗುಲ್ಬರ್ಗ ಒಳಗೊಂಡಂತೆ ಮೂರು ಅಬಕಾರಿ ವಿಭಾಗದ ಸಾವಿರಾರು ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಬೆಳಗಾವಿಯ ಅಬಕಾರಿ ಉಪ ಆಯುಕ್ತರಾದ ಮಂಜುನಾಥ ಅವರು ಇಲಾಖಾ ಸಿಬ್ಬಂದಿಗಳಿಗೆ ಉತ್ತಮ ದೈಹಿಕ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯ ಇರಬೇಕಾದರೆ ಇಂತಹ ಚಟುವಟಿಕೆಗಳ ಅವಶ್ಯಕತೆ ತುಂಬಾ ಇದೆ ಎಂದರು..
ವೈಯಕ್ತಿಕ ಹಾಗೂ ತಂಡ ವಿಭಾಗದ ಹಲವಾರು ಕ್ರೀಡೆಗಳು ನಡೆಯುತ್ತಿದ್ದು, ಸುಮಾರು 1000 ಸ್ಪರ್ಧಿಗಳು ಭಾಗಿಯಾಗಿದ್ದಾರೆ, ಒಟ್ಟು 16 ಕಂದಾಯ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗಿಯಾಗಿದ್ದಾರೆ ಎಂದರು.
ಓಟದ ಸ್ಪರ್ಧೆ, ಈಜು ಸ್ಪರ್ಧೆ, ವಾಲಿಬಾಲ್, ತ್ರೋಬಾಲ್, ಕ್ರಿಕೆಟ್, ಫುಟ್ ಬಾಲ್, ಕಬಡ್ಡಿ, ಕ್ರೀಡೆಗಳು ನಡೆಯುತ್ತಿದ್ದು, ವಿಜೇತರಾದವರಿಗೆ ಅತ್ತುತ್ತಮವಾದ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದರು..
ಈ ಕಾರ್ಯಕ್ರಮದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ರಾಷ್ಟ್ರೀಯ ಬಾಕ್ಸಿಂಗ್ ಆಟಗಾರ ಆದ ಕಿಲ್ಲೇಕರ ಅವರು, ಮೂರು ಅಬಕಾರಿ ವಿಭಾಗದ ಉಪ ಆಯುಕ್ತರು, ಸಿಬ್ಬಂದಿ ವರ್ಗ, ಸ್ಪರ್ಧಿಗಳು ಮುಂತಾದವರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ.
Join The Telegram | Join The WhatsApp |