Join The Telegram | Join The WhatsApp |
ಬೆಳಗಾವಿ: ಪುನೀತ್ ರಾಜ್‍ಕುಮಾರ್ ಅವರು ನಿಧನ ಹೊಂದಿದ್ದ ಸಂದರ್ಬದಲ್ಲಿ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು.
ಇದರಿಂದ ಪ್ರೇರಣೆಗೊಂಡು ಬೆಳಗಾವಿಯಲ್ಲಿ ಒಂದೇ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳು ಮತ್ತು ಪೋಷಕರು ನೇತ್ರದಾನಕ್ಕೆ ಸಹಿ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೆರೂ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ 85 ವಿದ್ಯಾರ್ಥಿಗಳು ಮತ್ತು 20 ಮಂದಿ ಪೋಷಕರು ಕಣ್ಣು ದಾನಕ್ಕೆ ಸಹಿ ಹಾಕಿದ್ದಾರೆ.
ಕಾಲೇಜು ವಾರ್ಷಿಕೋತ್ಸವದಲ್ಲಿ ಸಂದರ್ಭದಲ್ಲಿ ಶ್ರೀಶೈಲ ಕೋಲಾರ ಪ್ರಾಧ್ಯಾಪಕರ ನೇತೃತ್ವದಲ್ಲಿ ಸಹಿ ಹಾಕಿದ್ದು, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ನೇತ್ರದಾನ ಮಾಡುವುದಾಗಿ ಸಹಿ ಹಾಕಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ಪ್ರೇರಣೆಯಿಂದ ದಾನ ಮಾಡಿದ್ದೇವೆ.
ಅಪ್ಪು ಅವರು ಕಣ್ಣು ದಾನ ಮಾಡಿ ನಾಲ್ಕು ಜನರಿಗೆ ಬೆಳಕಾದರು. ನಾವು ಕಣ್ಣು ದಾನ ಮಾಡಿ ಇಬ್ಬರಿಗಾದರೂ ಸಹಾಯ ಆಗಲಿ. ನಮ್ಮ ಕಣ್ಣುಗಳ ಮೂಲಕ ಅವರು ಜಗತ್ತು ನೋಡುವಂತಾಗಲಿ ಎಂಬ ಉದ್ದೇಶದಿಂದ ದಾನಕ್ಕೆ ಸಹಿ ಹಾಕಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
Join The Telegram | Join The WhatsApp |