Join The Telegram | Join The WhatsApp |
ಬೆಳಗಾವಿ :ಶುಕ್ರವಾರ ದಿನಾಂಕ 16/12/22 ರಂದು ಜಿಲ್ಲಾ ಪೊಲೀಸ್ ಕಚೇರಿಯ ಮೈದಾನದಲ್ಲಿ ಜಿಲ್ಲೆಯಾದ್ಯಂತ ಕದೀಮರು ಕದ್ದಿರುವ ವಾಹನಗಳು, ಬೆಳ್ಳಿ, ಬಂಗಾರ, ಹಣದ ಪ್ರದರ್ಶನವೇ ಜರುಗಿತ್ತು..
ಬೆಳಗಾವಿ ಜಿಲ್ಲೆಯಲ್ಲಿ 2022ನೇಯ ಸಾಲಿನಲ್ಲಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾದ ಕಳ್ಳತನ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಎಲ್ಲಾ ಮೌಲ್ಯಯುತ ವಸ್ತುಗಳನ್ನು ಇಂದು ಸಂಭಂದಪಟ್ಟ ವಾರಸುದಾರರಿಗೆ ಮರಳಿಸುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿತ್ತು.
ಈ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು 201 ಪ್ರಕರಣಗಳಲ್ಲಿ, 324 ಆರೋಪಿಗಳನ್ನು ದಸ್ತಗೀರ ಮಾಡಿ, ಒಟ್ಟು
17, 54,59,195/ ರೂಪಾಯಿಗಳ ಮೌಲ್ಯದ ಕಳ್ಳತನ ಮಾಲನ್ನು ಮರಳಿ ಪಿರ್ಯಾದೆದಾರರಿಗೆ ನೀಡಲಾಗಿದೆ…
ಸುಮಾರು 8. 5 ಕೆಜಿ ಚಿನ್ನದ ಆಭರಣ, 7ಕೆಜಿ ಬೆಳ್ಳಿ, 250 ದ್ವಿಚಕ್ರ ವಾಹನ, 24 ಮೋಟಾರು ವಾಹನ, 120ಮೊಬೈಲ್ ಹಾಗೂ ಇತರೆ ವಸ್ತು, 7 ಕೋಟಿ, 47 ಲಕ್ಷ, ಚೀಲ್ಲರೆ ನಗದು ಹಣ, ಹೀಗೆ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಎಲ್ಲಾ ಸಂಪತ್ತನ್ನು ಮರಳಿ ವಾರಸುದಾರರಿಗೆ ನೀಡಿದ್ದಾರೆ..
ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ ಸಂಜೀವ್ ಪಾಟೀಲರವರು ಪ್ರಕರಣಗಳನ್ನು ಪತ್ತೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರಿಗೆ ಶ್ಲಾಘಿಸಿ, ಪ್ರಸಂಶೆ ವ್ಯಕ್ತಪಡಿಸಿದ್ದಾರೆ..
ಈ ಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ತಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಈಗ ಮರಳಿ ಪಡೆಯಲು ಬಂದಂತ ಪಿರ್ಯಾದೆದಾರರು ಭಾಗಿಯಾಗಿದ್ದರು..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |