Join The Telegram | Join The WhatsApp |
ಬೆಂಗಳೂರು:ವಂಚಕ ಸೈಬರ್ ಕಳ್ಳರಿಗೆ ಗೃಹಿಣಿ ಬಲಿಯಾಗಿದ್ದು, 3.30 ಲಕ್ಷ ರೂ.ಕಳೆದುಕೊಂಡಿದ್ದಾರೆ. ಅಮೃತಹಳ್ಳಿ ನಿವಾಸಿ ಅಂಬಿಕಾ (37) ಎಂಬಾಕೆಯೇ ಈ ವಂಚನೆಗೆ ಗುರಿಯಾದ ದುರ್ದೈವಿ.
ಸೆಪ್ಟೆಂಬರ್ 12 ರಂದು ಅಂಬಿಕಾ ಅವರ ವಾಟ್ಸಾಪ್ ಸಂಖ್ಯೆಗೆ ಪರಿಚಯವಿಲ್ಲದ ನಂಬರಿಂದ ಅಧಿಕೃತ ಸಂದೇಶ ಬಂದಿದ್ದು, ಆಕೆಯ ಬ್ಯಾಂಕ್ ಖಾತೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಒದಗಿಸಿದ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಸಂದೇಶದಲ್ಲಿ ಬರೆದಿತ್ತು. ಸಂದೇಶವು ತನ್ನ ಬ್ಯಾಂಕ್‌ನಿಂದ ನಿಜವಾಗಿ ಬಂದಿದೆ ಎಂದು ಭಾವಿಸಿ, ಅಂಬಿಕಾ ಲಿಂಕ್ ಅನ್ನು ಕ್ಲಿಕ್ ಮಾಡಿದರು.
ಆದರೆ, ಶೀಘ್ರದಲ್ಲೇ ಆಕೆಯ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು 3.30 ಲಕ್ಷ ರೂ. ಎಗರಿಸಿದ್ದಾರೆ. ಹಣ ಕಡಿತದಿಂದ ಗಾಬರಿಗೊಂಡ ಅಂಬಿಕಾ ಅವರು ಸ್ಪಷ್ಟೀಕರಣವನ್ನು ಪಡೆಯಲು ತಮ್ಮ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದರು.ಆಗ ಆಕೆ ವಂಚನೆಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿದೆ.
Join The Telegram | Join The WhatsApp |