ಮುದಗಲ್ಲ .
ಮುದಗಲ್ಲ; ವಿಷ್ಣುಕುಮಾರ ಶ್ರೀಧರಪ್ಪ ಚಳಗೇರಿ ಅವರು ರಾಯಚೂರ ಜಿಲ್ಲೆಯ
ಲಿಂಗಸುಗೂರ ತಾಲೂಕಿನ ಮುದಗಲ್ಲ ಸಮೀಪದ ಬಗಡಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು,
ಶಿಕ್ಷಣ ಕ್ಷೇತ್ರದಲ್ಲಿ ಇವರ ಸೇವೆಯನ್ನು ಪರಿಗಣಿಸಿ
2023-24 ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣನಿಧಿ,ಶಿಕ್ಷಕರ ಸದನ ಬೆಂಗಳೂರು ಇವರ ವತಿಯಿಂದ ನೀಡುವ ಜಿಲ್ಲಾ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರು ಕೇವಲ
ಶಿಕ್ಷಣ ವೃತ್ತಿಗೆ ಮಾತ್ರ ಸೀಮಿತ ವಾಗದೇ ಸಂಗೀತ ಕ್ಷೇತ್ರದಲ್ಲಿ
ಹಾಗೂ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವರದಿ: ಮಂಜುನಾಥ ಕುಂಬಾರ