ಪೀಣ್ಯ ದಾಸರಹಳ್ಳಿ:- ಕೆಲವು ದಿನಗಳಿಂದ ಪ್ರಜಾ ಶಕ್ತಿ ಸೇವಾ ಸಂಘದ ರಾಜ್ಯಾಧ್ಯಕ್ಷ ಉಮೇಶ್ ಗೌಡ ಹೆಗ್ಗನಹಳ್ಳಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಭಾಗ್ಯ ಮತ್ತು ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಅಲಿಯಾಸ್ ಉಮೇಶ್ ರಾವ್ ಇವರುಗಳನ್ನು ಸಂಘದಿಂದ ವಜಾ ಮಾಡಲಾಗಿದೆ ಎಂದು ಪ್ರಜಾ ಶಕ್ತಿ ಸೇವಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾವರನಹಳ್ಳಿ ಬೇಟ್ಟಪ್ಪ ಜಿ ರಾವಣ್ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಮಂಜುಳಾ ಅವರ ನೇತೃತ್ವದಲ್ಲಿ ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ನಡೆಸಿ ಈ ಮೂರು ಜನ ಪ್ರಜಾ ಶಕ್ತಿ ಸೇವಾ ಸಂಘದ ಹೆಸರು ಹೇಳಿಕೊಂಡು ಜನರಿಗೆ ಮೊಸ ಮಾಡದನ್ನು ನನ್ನ ಗಮನಕ್ಕೆ ಬಂದಿದೆ ಆ ಹಿನ್ನೆಲೆಯಲ್ಲಿ ಸಂಘದಿಂದ ವಜಾ ಮಾಡಲಾಗಿದೆ
ಸಂಘದ ಐಡಿ ಕಾರ್ಡ್, ವಿಜಟಿಂಗ್ ಕಾರ್ಡ್ ತೋರಿಸಿ ಮೊಸ ಮಾಡಿದರೆ ಸಂಘ ಜವಾಬ್ದಾರಿ ಅಲ್ಲ ಇವರುಗಳು ತಮ್ಮ ಐಡಿ ಕಾರ್ಡ್ ವಿಜಟಿಂಗ್ ಕಾರ್ಡ್ ಸಂಘಕ್ಕೆ ಒಪ್ಪಿಸಬೇಕು ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಕಾವರನಹಳ್ಳಿ ಬೆಟ್ಟಪ್ಪ ಜಿ ರಾವಣ್ ಪತ್ರಿಕಾಗೋಷ್ಠಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್,ಚಂದ್ರಪ್ಪ, ಶಶಿಕುಮಾರ್, ಶೋಭಾ,ಲಕ್ಷ್ಮಮ್ಮ,ಅಷೀಯಾ, ಫಾತಿಮಾ, ತಾಸಿನ, ಮುಂತಾದವರು ಇದ್ದರು.
ವರದಿ:-ಅಯ್ಯಣ್ಣ ಮಾಸ್ಟರ್