ಸಿಂಧನೂರು : ತಾಲೂಕ ವ್ಯಾಪ್ತಿಗೆ ಬರುವ ಜವಳಗೇರಾ ಹೋಬಳಿ ಮಲದಿನ್ನಿ ಕಡೇಹೊಲ ಗ್ರಾಮದ ಸರ್ವೇ ನಂಬರ್ 45 ರಲ್ಲಿ ಸುಮಾರು 25 ವರ್ಷಗಳ ಹಿಂದೆ 6 ಎಕರೆ 27 ಗುಂಟೆ ತಹಸಿಲ್ದಾರ್ ಸಿಂಧನೂರು ಅವರು 1992 ರಲ್ಲಿ ಖರೀದಿಸಿ ಆಶ್ರಯ ಯೋಜನೆ ಅಡಿಯಲ್ಲಿ 165 ಪ್ಲಾಟುಗಳನ್ನು ಮಾಡಿ ನಿವೇಶನರಹಿತರಿಗೆ ಹಂಚಿದ್ದು ಇನ್ನುಳಿದ ಜಾಗವನ್ನು ಗ್ರಾಮದಲ್ಲಿ ಶಾಲಾ ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳಿಗೆ ಮೀಸಲಿಡಲಾಗಿತ್ತು.
1994 ರಲ್ಲಿ ದೇವಪ್ಪ ತಂದೆ ಚಾಗಪ್ಪ ಎಂಬುವರು ಸದರಿ ಸರ್ವೆ ನಂಬರಿನ ಪೈಕಿ 1 ಎಕರೆ13 ಗುಂಟೆ ಜಮೀನು ಖರೀದಿಸಿ ಗ್ರಾಮಕ್ಕೆ ಮೀಸಲಿಟ್ಟಿದ್ದ ಜಾಗ ಒತ್ತುವರಿ ಮಾಡಿಕೊಂಡಿದ್ದರು ಗ್ರಾಮಸ್ಥರು ಇದನ್ನು ಪ್ರಶ್ನಿಸಿ ತಹಶೀಲ್ದಾರರರಿಗೆ ಮನವಿ ಮಾಡಿದಾಗ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಿದ್ದರು ಈಗ ಪುನ ಅವರ ಮಗನಾದ ಆಂಜನೇಯ ಅಲ್ಲಿನ ಗ್ರಾಮಸ್ಥರಿಗೆ ಬೆದರಿಕೆ ಹಾಕಿ ಗ್ರಾಮಕ್ಕೆ ಮೀಸಲಿಟ್ಟ ಜಾಗ 20 ಪೀಟು ರಸ್ತೆ ಒತ್ತುವರಿ ಮಾಡಿಕೊಂಡು ಸಂಪೂರ್ಣ ರಸ್ತೆ ಅಗಿದು ಪ್ಲಾಟ್ ಮಾಡಲು ಹೊರಟಿದ್ದಾನೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಪ್ರಯೋಜನ ಆಗಿಲ್ಲ ಎಂದು ಚಿನ್ನಪ್ಪ ಹೆಡಗೀಬಾಳ ಡಿ ಎಸ್ ಎಸ್. ಮುಖಂಡ ಇವರ ಮುಂದೆ ಗ್ರಾಮಸ್ಥರು ಅಳಿಲು ವ್ಯಕ್ತಪಡಿಸಿದಾಗ ಚಿನ್ನಪ್ಪನವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದು ಶೀಘ್ರವಾಗಿ ಗ್ರಾಮಸ್ಥರ ಸಮಸ್ಯೆ ಬಗೆಹರಿಸಿ ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ,
ಗ್ರಾಮಸ್ಥರಾದ ಪಾಮೇಶ್ ಕಟ್ಟಿಮನಿ. ರಮೇಶ್ ಗ್ರಾಮ ಪಂಚಾಯತಿ ಸದಸ್ಯರು. ಮೈನುದ್ದೀನ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರು. ರಾಮಾಂಜನೇಯ. ವೆಂಕಟೇಶ. ದುರ್ಗಪ್ಪ. ನಂದಪ್ಪ. ಶ್ಯಾಮಿದು, ಸುರೇಖಾ ಕಟ್ಟಿಮನಿ. ರೇಣುಕಾ. ಸುನಿತಾ. ಲಕ್ಷ್ಮಿ.ಶಾಂತಮ್ಮ. ಹುಲಿಗೆಮ್ಮ ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ