Join The Telegram | Join The WhatsApp |
ನವದೆಹಲಿ : ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಿಸಿದ್ದು, ಜನವರಿ 16 ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಸಾನಿಯಾ ಅವರ ಕೊನೆಯ ಟೂರ್ನಿಯಾಗಿದೆ. ಸಾನಿಯಾ ಮಿರ್ಜಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 19 ರಂದು ಆರಂಭವಾಗಲಿರುವ ಡಬ್ಲ್ಯುಟಿಎ 1000 ದುಬೈ ಟೆನಿಸ್ ಚಾಂಪಿಯನ್ಶಿಪ್ ನಂತರ ನಿವೃತ್ತಿಯಾಗುವುದಾಗಿ ಸಾನಿಯಾ ಈ ಹಿಂದೆ ಘೋಷಿಸಿದ್ದರು. ಆದರೆ ಇದೀಗ ಆಸ್ಟ್ರೇಲಿಯನ್ ಓಪನ್ ಮೂಲಕವೇ ತಮ್ಮ ವೃತ್ತಿಜೀವನವನ್ನ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ನಂತರ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಇನ್ನು ಸಾನಿಯಾ ಮಿರ್ಜಾ, ’30 ವರ್ಷಗಳ ಹಿಂದೆ ಹೈದರಾಬಾದ್ನ ಆರು ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಮೊದಲ ಬಾರಿಗೆ ಕೋರ್ಟ್ಗೆ ಹೋದಳು ಮತ್ತು ಕೋಚ್ ಟೆನಿಸ್ ಹೇಗೆ ಆಡಬೇಕೆಂದು ವಿವರಿಸಿದರು. ನಾನು ಟೆನಿಸ್ ಕಲಿಯಲು ತುಂಬಾ ಚಿಕ್ಕವಳಿದ್ದೇನೆ ಎಂದು ನಾನು ಭಾವಿಸಿದೆ. ನನ್ನ ಕನಸುಗಳ ಹೋರಾಟ ಕೇವಲ 6ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು’
Join The Telegram | Join The WhatsApp |