Join The Telegram | Join The WhatsApp |
ಮೈಸೂರು : ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ಹೀಗಾಗಿ ಬಿಜೆಪಿ ತೊರೆಯಲು ಸಿದ್ದವಾಗಿರುವುದು ಸತ್ಯ ಎಂದು ಬಿಜೆಪಿ ಎಂಎಲ್ ಸಿ ಹೆಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ನಾನು ಹಿಡಿಯುವ ಧ್ವಜ ಕಾಲದ ಅನುಸಾರ ಬದಲಾಗಿರಬಹುದು.
ಆದರೆ ನನ್ನ ತತ್ವ ಬದಲಾಗಿಲ್ಲ. ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ಕಾಂಗ್ರೆಸ್ ಬಿಟ್ಟಿದ್ದು ಸತ್ಯ. ಬಿಜೆಪಿಯಿಂದ ಹಣ ಪಡೆದ್ರೆ ಸರ್ಕಾರ ತಪ್ಪು ಹೇಳಲು ಆಗುತ್ತಿರಲಿಲ್ಲ ಎಂದರು.
20 ವರ್ಷ ರಾಜಕಾರಣ ಮಾಡಿದ್ದೇನೆ. ಇನ್ನೂ ಚಿಕ್ಕ ಮನೆಯಲ್ಲೇ ಇದ್ದೇನೆ. ಮೂರು ಎಕರೆ ಜಮೀನಿದೆ. ನನ್ನ ಮಕ್ಕಳನ್ನು ಅದರಲ್ಲೇ ಸಾಕಿದ್ದೇನೆ ಎಂದು ಹೇಳಿದ್ದಾರೆ.
Join The Telegram | Join The WhatsApp |