Join The Telegram | Join The WhatsApp |
ಹುಬ್ಬಳ್ಳಿ:ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಂಕಲ್ಪ ಯಾತ್ರೆಗೆ ಜನರೇ ಸೇರುತ್ತಿಲ್ಲ. ಅವರನ್ನು ಹಿಡಿದಿಡಲು ಕಾರ್ಯಕ್ರಮದ ಮುಂಭಾಗದ ಗೇಟ್ ಗಳನ್ನು ಬೀಗ್ ಹಾಕಿ ಕಟ್ಟಿಹಾಕಲು ಬಿಜೆಪಿಯವರು ವಿಫಲ ಯತ್ನ ಮಾಡುತ್ತಿದ್ದಾರೆಂದು ಟೀಕಿಸಿದರು.
ಆರ್ಥಿಕವಾಗಿ ಹಿಂದೂಳಿದ ವರ್ಗ (ಇಡಬ್ಲೂಎಸ್ ) ಗೆ ಶೇ.10 ರಷ್ಟು ಮೀಸಲಾತಿ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ನಾನು ಇನ್ನೂ ನೋಡಿಲ್ಲ. ನೋಡಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ನನಗೆ ಗೊತ್ತಿರುವ ಪ್ರಕಾರ ಸಂವಿಧಾನದ ಆರ್ಟಿಕಲ್ 15 & 16 ರ ಅಡಿಯಲ್ಲಿ ಆರ್ಥಿಕವಾಗಿ, ಹಿಂದೂಳಿದವರಿಗೆ ಮೀಸಲಾತಿ ಕಲ್ಪಿಸಲು ಅವಕಾಶವಿಲ್ಲ. ಸಾಮಾಜಿಕವಾಗಿ ಹಿಂದೂಳಿದ ಮತ್ತು ಅಸ್ಪೃಶ್ಯತೆ ಹಾಗೂ ಅಸಮಾನತೆ ಮತ್ತು ಶೈಕ್ಷಣಿಕವಾಗಿ ಹಿಂದೂಳಿದ ಸಮೂದಾಯಗಳಿಗೆ ಮಾತ್ರ ಮೀಸಲು ನೀಡಬಹುದು ಎಂಬುದನ್ನು ಸಂವಿಧಾನ ಹೇಳುತ್ತದೆ ಎಂದು ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ ಸತೀಶ ಜಾರಕಿಹೊಳಿ ನೀಡಿದ ಹಿಂದೂ ಪದ ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎಂದಷ್ಟೇ ಹೇಳಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡೋದು ತಪ್ಪಲ್ಲ, ಆದರೆ ಸರ್ಕಾರ ಜಯಂತಿಯನ್ನು ನಿಷೇಧ ಮಾಡಿದ್ದಾರೆ. ಹೀಗಾಗಿ ಪಾಲಿಕೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ಎಂದು ತಿಳಿಸಿದರು.
ವರದಿ ಸುಧೀರ್ ಕುಲಕರ್ಣಿ
Join The Telegram | Join The WhatsApp |