Join The Telegram | Join The WhatsApp |
ಹರಪನಹಳ್ಳಿ : 2023 ರ ಏಪ್ರಿಲ್ ಅಥವಾ ಮೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಾರಂಭವಾಗುತ್ತೆ ಬಿಜೆಪಿ ಪಕ್ಷ ಕೇಂದ್ರದಿಂದ ಹಿಡಿದು ರಾಜ್ಯ ಮತ್ತು ಜಿಲ್ಲೆ ತಾಲೂಕು ಬೂತ್ ವರೆಗೆ ಎಲ್ಲಾ ನಾಯಕರು ಕಾರ್ಯಕರ್ತರು ಸೇರಿಕೊಂಡು ಯುದ್ಧದ ರೂಪದಲ್ಲಿ ಕೆಲಸವನ್ನು ಸಕ್ರಿಯವಾಗಿ ಭಾಗವಹಿಸಬೇಕು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದಿಂದ ಜನಸಾಮಾನ್ಯರಿಗೆ ಮಾಡಿರುವ ಸಾಧನೆಗಳನ್ನು ಇದೇ ಜನವರಿ 21.ರಿಂದ 29.ರ ವರೆಗೆ ವಿಜಯ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳುತ್ತೇವೆ ಎಂದು ರಾಜ್ಯ ಸಹಕಾರ ಪ್ರಕೋಷ್ಟಾ ಸಹ ಸಂಚಾಲಕರು ಹಾಗೂ ರಾಜ್ಯ ಸಂಯುಕ್ತ ಸೌಹಾರ್ದ ಬ್ಯಾಂಕ್ ರಾಜ್ಯ ಅಧ್ಯಕ್ಷರಾದ ನಂಜನಗೌಡ್ರು, ಹೇಳಿದರು
ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ನೆಡಿಸಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ 10 ವಿಭಾಗಗಳಾಗಿ ಆಡಳಿತಾತ್ಮಕ ಸಂಘಟನೆ ಗಳನ್ನು ವಿಂಗಡಿಸಿದೆ 39 ಸಂಘಟನಾತ್ಮಕ ಜಿಲ್ಲೆಗಳು 312 ಮಂಡಲಗಳು ನಮ್ಮ ವಿಜಯನಗರ ಜಿಲ್ಲೆಯಲ್ಲಿ 5. ಮಂಡಲಗಳು ಹೊಸಪೇಟೆ ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಹರಪನಹಳ್ಳಿ ಹಡಗಲಿ ಒಳಗೊಂಡಿದೆ ಹರಪನಹಳ್ಳಿ ಮಂಡಲದ 257 ಬೂತ್ ಗಳಿವೆ 8 ಮಹಾಶಕ್ತಿ ಕೇಂದ್ರ 7. ಜಿಲ್ಲಾ ಪಂಚಾಯಿತಿ ಕೇಂದ್ರಗಳು ಮತ್ತು ಹರಪನಹಳ್ಳಿ ನಗರ ಸೇರಿಕೊಂಡರೆ 8. ಎಂದು ತಿಳಿಸಿದರು.
30 ಗ್ರಾಮ ಪಂಚಾಯಿತಿಯಲ್ಲಿ ಹರಪನಹಳ್ಳಿ ನಗರ ಸೇರಿದರೆ 54 ಶಕ್ತಿ ಕೇಂದ್ರ ಇವೆ ಯಾವುದೇ ಕಾರಣಕ್ಕೂ ಒಂದು ಸಣ್ಣ ಬೂತು ಕೂಡ ನಿರ್ಲಕ್ಷ ಮಾಡದೆ ನಮ್ಮ ತಾಲೂಕಿನಲ್ಲಿ ಬಿಜೆಪಿ ಎಲ್ಲಾ ನಾಯಕರು 257 ಬೂತುಗಳನ್ನು ಹಂಚಿಕೊಂಡು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಮಾಡಿದ ಸಾಧನೆಯ ಕರಪತ್ರ ಮತ್ತು ಡಿಜಿಟಲ್ ಪೋಸ್ಟರ್ ಪ್ರತಿ ಮನೆಗೆ ಅಂಟಿಸುವುದು ಮನೆಯ ಗೋಡೆಗಳ ಮೇಲೆ ಬರಹಗಳನ್ನು ಬರೆಯುವುದು ಇಡೀ ವಿಶ್ವದಲ್ಲಿ ಭಾರತೀಯ ಜನತಾ ಪಕ್ಷ ಅತಿ ರಾಜಕೀಯ ದೊಡ್ಡ ಪಕ್ಷ ನಮ್ಮ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕು ನಮ್ಮ ಭಾರತೀಯ ಜನತಾ ಪಕ್ಷ ಭಾರತದ ದೇಶದ ಆಶಾಕಿರಣ ಎಂದು ಹೇಳಿದರು
ಸತ್ತೂರು ಹಾಲೇಶ್,ಅರುಂಡಿ ನಾಗರಾಜ್, ಸುವರ್ಣ ಅರುಂಡಿ ನಾಗರಾಜ್,ಮಾತನಾಡಿದರು
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹರಾಳ್ ಅಶೋಕ.ಮಹಾಬಲೇಶ್ವರಗೌಡ್ರು,TS,ದೇವರಾಜ್ ಮಸ್ಕಿ ವಿಸ್ತರಕರು ಹರಪನಹಳ್ಳಿ ಉಸ್ತುವಾರಿ, ಓಂಕಾರ್ ಗೌಡ್ರು, ಉದಯ ಬಾವಿಹಳ್ಳಿ, ಶಂಕರ್ ಎಂ, ನಾಗರಾಜ್ ಪಾಟೀಲ್, ಚಂದ್ರಶೇಖರ ಪೂಜಾರ್, ಮೈದೂರು ಮಲ್ಲಿಕಾರ್ಜುನ,ಮುತ್ತಿಗಿ ವಾಗೀಶ್,ಬಸವನಗೌಡ್ರು ಚನ್ನಾನಗೌಡ, ಲಿಂಗಾನಂದ್ ವಕೀಲರು, ಕುಸುಮ ಜಗದೀಶ್, ಜಿಎಂ ರೇಖಾಮ್ಮ, ಸುರೇಶ್ ಶಾನಬೋಗ್ ನೀಲಗುಂದ ಪಾಟೀಲ್. ಬಸವನಗೌಡ. ವಿನಾಯಕ ಭಜಂತ್ರಿ, ವೇಣುಗೋಪಾಲ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೈದುರ್ ಮಲ್ಲಿಕಾರ್ಜುನ್, ವೆಂಕಟೇಶ್ ನಾಯಕ್ ಇತರರು ಉಪಸ್ಥಿತರಿದ್ದರು.
Join The Telegram | Join The WhatsApp |