Join The Telegram | Join The WhatsApp |
ಸೋಲಾಪುರ: ಜಿಲ್ಲೆಯ 189 ಗ್ರಾಮ ಪಂಚಾಯಿತಿಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 62 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಮಹಾವಿಕಾಸ ಅಘಾಡಿ 50 ಗ್ರಾಮ ಪಂಚಾಯ್ತಿಗಳಲ್ಲಿ ಗೆಲುವು ಸಾಧಿಸಿದೆ. ಮಾಜಿ ಶಾಸಕ ದಿಲೀಪ ಮಾನೆ, ನಾರಾಯಣ ಪಾಟೀಲ, ದಿಗ್ವಿಜಯ ಬಾಗಲ ಅವರ ಬೆಂಬಲಿಗರು ಪಕ್ಷೇತರವಾಗಿ ಕಣಕ್ಕಿಳಿದು 46 ಗ್ರಾಮ ಪಂಚಾಯಿತಿಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಉತ್ತರ ಸೋಲಾಪುರ ತಾಲ್ಲೂಕಿನ 12 ಗ್ರಾಮ ಪಂಚಾಯ್ತಿಗಳ ಪೈಕಿ 8 ರಲ್ಲಿ ದಿಲೀಪ ಮಾನೆ ಗುಂಪು ವಿಜಯ ಸಾಧಿಸಿದೆ. ಮಾಳಶಿರಸ ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳ ಪೈಕಿ 26ರಲ್ಲಿ ಬಿಜೆಪಿಯ ರಣಜಿತ್ ಸಿಂಹ ಪಾಟೀಲ ಗುಂಪು ವಿಜಯ ಸಾಧಿಸಿದೆ. ಕಾಂಗ್ರೆಸ್ 2 ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ 2 ಪಂಚಾಯಿತಿಗಳಲ್ಲಿ ವಿಜಯ ಗಳಿಸಿದೆ. ಸಾಂಗೋಲಾ ತಾಲ್ಲೂಕಿನ 6 ಗ್ರಾಮ ಪಂಚಾಯ್ತಿಗಳ ಪೈಕಿ ಶಾಸಕ ಶಹಾಜಿ ಪಾಟೀಲ ಹಾಗೂ ಮಾಜಿ ಶಾಸಕ ದೀಪಕ ಸಾಳುಂಕೆ ಅವರ ಗುಂಪು 4 ಪಂಚಾಯಿತಿಗಳಲ್ಲಿ ವಿಜಯ ಸಾಧಿಸಿದೆ. ಬಾರ್ಸಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಪೈಕಿ 12 ಬಿಜೆಪಿ, 8 ಶಿವಸೇನಾ ಠಾಕ್ರೆ ಪಕ್ಷ ವಿಜಯ ಪತಾಕೆ ಹಾರಿಸಿದೆ. ದಕ್ಷಿಣ ಸೋಲಾಪುರ ತಾಲ್ಲೂಕಿನ 16 ಗ್ರಾಮ ಪಂಚಾಯ್ತಿಗಳ ಪೈಕಿ ಮಹಾವಿಕಾಸ ಆಘಾಡಿ 12 ಗ್ರಾಮ ಪಂಚಾಯಿತಿಗಳಲ್ಲಿ ವಿಜಯ ಸಾಧಿಸಿದೆ. ಮಾಢಾ ತಾಲ್ಲೂಕಿನ 8 ಗ್ರಾಮ ಪಂಚಾಯ್ತಿಗಳ ಪೈಕಿ ರಾಷ್ಟ್ರವಾದಿ ಕಾಂಗ್ರೆಸ್ ಶಾಸಕ ಬಬನರಾವ್ ಸಿಂಧೆಯವರ ಗುಂಪು ಎಲ್ಲಾ ಪಂಚಾಯ್ತಿಗಳಲ್ಲಿ ವಿಜಯ ಸಾಧಿಸಿದೆ. ಕರಮಳಾ ತಾಲ್ಲೂಕಿನಲ್ಲಿ ಮಾಜಿ ಶಾಸಕ ನಾರಾಯಣ ಪಾಟೀಲ ನೇತೃತ್ವದಲ್ಲಿ 19 ಸ್ಥಾನಗಳಲ್ಲಿ ವಿಜಯ ಸಾಧಿಸಿದರೆ, 11 ಸ್ಥಾನಗಳು ಮಾಜಿ ಶಾಸಕ ದಿಗ್ವಿಜಯ ಬಾಗಲ ಗುಂಪಿನವರ ಪಾಲಾಗಿದೆ. ಪಕ್ಷಗಳ ಬಲಾಬಲ. ಬಿಜೆಪಿ 62, ರಾಷ್ಟ್ರವಾದಿ ಕಾಂಗ್ರೆಸ್ 24, ಕಾಂಗ್ರೆಸ್ 21, ಶಿವಸೇನಾ ಠಾಕರೆ 5, ಸೇತಕರಿ ಕಾಮಗಾರಿ ಪಕ್ಷ 2 ಸ್ಥಾನ ಗಳಿಸಿದೆ. ಪಕ್ಷೇತರವಾಗಿ ಸ್ಪರ್ಧಿಸಿದ್ದ ದಿಲೀಪ ಮಾನೆ ಬೆಂಬಲಿಗರು 8, ನಾರಾಯಣ ಪಾಟೀಲ ಬೆಂಬಲಿಗರು 19, ದಿಗ್ವಿಜಯ ಬಾಗಲ ಬೆಂಬಲಿಗರು 11 ಗ್ರಾಮ ಪಂಚಾಯಿತಿಗಳಲ್ಲಿ ವಿಜಯ ಸಾಧಿಸಿದ್ದಾರೆ.
Join The Telegram | Join The WhatsApp |