Join The Telegram | Join The WhatsApp |
ಬೆಳಗಾವಿ: ದಿನಾಂಕ 27 ಅಕ್ಟೋಬರನ ಗುರುವಾರದಂದು ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸ್ಥೆಯ ಚೇರ್ಮಣ್ಣರಾದ ರೇಖಾ ಚನ್ನಾಕಟ್ಟಿ ಅವರು ಬೆಳಗಾವಿ ಜಿಲ್ಲೆಯಲ್ಲಿ ನಡೆಸಲಾಗುವ ಬ್ರಹತ್ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದರು..
ಜೆ ಎಂ ಇಂಡಸ್ಟ್ರೀಸ್ ವತಿಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೊಳ ಎಂಬಲ್ಲಿ ಈ ಬ್ರಹತ್ ಉದ್ಯೋಗ ಮೇಳ ನಡೆಯುತ್ತಿದ್ದು, ಸಹೋದರಿ ನಿವೇದಿತಾ ಹಾಗೂ ಸರದಾರ ವಲ್ಲಭಾಯಿ ಪಟೇಲ ಅವರ ಜಯಂತಿ ಅಂಗವಾಗಿ ನಡೆಸಲಾಗುತ್ತಿದೆ ಎಂದರು..
ದಿನಾಂಕ 31/10/2022ರಂದು ರಾಮದುರ್ಗದ ಗೊಡಚಿ ವೀರಭದ್ರಶ್ವರ ದೇವಸ್ಥಾನದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಈ ಮೇಳ ನಡೆಯುತ್ತಿದ್ದು, ಇಡೀ ರಾಮದುರ್ಗ ತಾಲೂಕಿನಲ್ಲಿ ಇದೆ ಪ್ರಥಮ ಉದ್ಯೋಗ ಮೇಳವಾಗಿದೆ ಎಂದರು…
ಈ ಮೇಳದಲ್ಲಿ 7 ನೆಯ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ವಿದ್ಯಾರ್ಹತೆ ಹೊಂದಿದವರು ಭಾಗಿಯಾಗಬಹುದು, ರಾಜ್ಯದ ಸುಮಾರು 50 ಕ್ಕು ಅಧಿಕ ಪ್ರತಿಷ್ಠಿತ ಸಂಸ್ಥೆಗಳು ಈ ಮೇಳದಲ್ಲಿ ಭಾಗಿಯಾಗುತ್ತಿದ್ದು, ಜಿಲ್ಲೆಯ ಯುವ ಸಮುದಾಯ ಇದರ ಉಪಯೋಗ ಪಡೆಯಬೇಕೆಂದು ತಿಳಿಸಿದರು..
ಯುವಕರು ಮೇಳಕ್ಕೆ ಬರುವಾಗ ಆಧಾರ ಕಾರ್ಡ, ಶೈಕ್ಷಣಿಕ ದಾಖಲಾತಿಗಳು, ಫೋಟೋ, ಇಂತಹ ಅವಶ್ಯಕ ದಾಖಲಾತಿಯೊಂದಿಗೆ ಹಾಜರಾಗಬೇಕು, ಯುವಕರು ಸ್ವಾವಲಂಬಿ ಜೀವನ ನಡೆಸಲು ಈ ಮೇಳ ಅವಸ್ಯಕವಿದ್ದು ಅದರ ಸದುಪಯೋಗ ಎಲ್ಲ ಯುವಕರು ಪಡೆದುಕೊಳ್ಳಬೇಕು ಎಂದರು..
ಈ ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಚೇರ್ಮನ್ನರಾದ ಡಾ ರೇಖಾ ಚೆನ್ನಾಕಟ್ಟಿ, ಎಂ ಡಿ ಆದಂತ ವಿಠ್ಠಲ ನಾಯಕ ಮತ್ತಿತರರು ಉಪಸ್ಥಿತರಿದ್ದರು..
ವರದಿ: ಪ್ರಕಾಶ್ ಕುರಗುಂದ
Join The Telegram | Join The WhatsApp |