This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಬೆಳಗಾವಿಯಲ್ಲಿ ಅಯ್ಯಪ್ಪ ಸ್ವಾಮಿಯ ಬ್ರಹತ್ ಮಹಾಪೂಜೆ : ಮುರುಗೆಂದ್ರಗೌಡ ಪಾಟೀಲ ಸ್ಪಷ್ಟನೆ.

Join The Telegram Join The WhatsApp

ಬೆಳಗಾವಿ: ಗಡಿನಾಡಾದ ಬೆಳಗಾವಿಯಲ್ಲಿ ಲಕ್ಷಾಂತರ ಅಯ್ಯಪ್ಪ ಸ್ವಾಮಿಯ ಭಕ್ತರು ಇದ್ದು, ಪ್ರತಿ ವರ್ಷ ಇಲ್ಲಿ ವಿಶೇಷ ಪೂಜೆಗಳಾಗಿ, ಭಕ್ತರು ಸ್ವಾಮಿಯ ವೃತವನ್ನು ಮಾಡಿ, ಶಬರಿಮಲೆಗೆ ತೆರಳಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುವರು.

ಅದೇ ಈ ವರ್ಷವೂ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ್ದು, ಈ ವರ್ಷ ಬೆಳಗಾವಿಯಲ್ಲಿ ಈ ಹಿಂದೆ ಯಾವತ್ತೂ ಆಗಿರದಂತ ಅಯ್ಯಪ್ಪ ಪೂಜೆ ಬ್ರಹತ್ ಪ್ರಮಾಣದಲ್ಲಿ ಜರಗುತ್ತಿದೆ.

ಈ ಮಹಾ ಪೂಜೆಯ ಸಕಲ ಜವಾಬ್ದಾರಿ ಹಾಗೂ ಉಸ್ತುವಾರಿಯನ್ನು ಬೆಳಗಾವಿಯ ಉತ್ತರ ಮತಕ್ಷೇತ್ರದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದ ಮೂರುಗೆಂದ್ರ ಪಾಟೀಲ ವಹಿಸಿಕೊಂಡಿದ್ದಾರೆ.

ಹಿಂದೆಂದೂ ಆಗಿರದಂತೆ ನಡೆಯುವ ಈ ಮಹಾ ಪೂಜೆಗೆ, ನಾಡಿನ ಮಹಾ ಪೀಠಾಧಿಪತಿಗಳು ದಿವ್ಯ ಸಾನಿಧ್ಯ ವಹಿಸಿಕೊಳ್ಳುವರು, ಅದೇರೀತಿ ನಾಡಿನ ಎಲ್ಲಾ ಪ್ರಮುಖ ಗುರುಸ್ವಾಮಿಗಳು ಆಗಮಿಸುವರು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ವಿಶೇಷವಾಗಿ ನಡೆಯುವ ಈ ಅಯ್ಯಪ್ಪಸ್ವಾಮಿಯ ಮಹಾ ಪೂಜೆಗೆ ಬೆಳಗಾವಿಯ ಎಲ್ಲಾ ಕ್ಷೇತ್ರದ ಪ್ರಮುಖ ಗಣ್ಯರು, ಜನಪ್ರತಿನಿಧಿಗಳು, ಸಾವಿರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಸಾರ್ವಜನಿಕರು ಭಾಗಿಯಾಗಿ ಬೆಳಗಾವಿಯ ಜನಮಾನಸದಲ್ಲಿ ಹಸಿರಾಗಿ ಉಳಿಯುವಂತೆ ಈ ಪೂಜೆಯನ್ನು ಮಾಡಲಾಗುವದು ಎಂದು ತಿಳಿದುಬಂದಿದೆ…

ವರದಿ : ಪ್ರಕಾಶ ಕುರಗುಂದ.


Join The Telegram Join The WhatsApp
Bharath Vaibhav
the authorBharath Vaibhav

Leave a Reply