Join The Telegram | Join The WhatsApp |
ಬೆಂಗಳೂರು: ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಧಿಕೃತವಾಗಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಎಸ್.ಎಂ.ಕೃಷ್ಣ, ನಾನು ರಾಜಕೀಯದಿಂದ ದೂರ ಉಳಿದು ಬಹಳ ದಿನಗಳು ಕಳೆದಿವೆ.
ರಾಜಕೀಯದಲ್ಲಿ ಯಾರೂ ಪಿಂಚಣಿ ನೀಡಲ್ಲ, ಹಾಗಾಗಿ ಹೈಕಮಾಂಡ್ ಗಮನಕ್ಕೆ ತಂದು ನಿವೃತ್ತಿ ಘೋಷಿಸಬೇಕಿಲ್ಲ ಎಂದು ಹೇಳಿದರು.
ವಯಸ್ಸಿನ ಬಗ್ಗೆ ಎಲ್ಲರಿಗೂ ಅರಿವಿರಬೇಕು. 90ರಲ್ಲಿ ನಾವು 50 ವರ್ಷದ ರೀತಿ ನಟನೆ ಮಾಡಲು ಸಾಧ್ಯವಿಲ್ಲ, ವಯಸ್ಸಿಗೆ ಬೆಲೆಕೊಟ್ಟು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ತಿಳಿಸಿದರು. ಈ ಮೂಲಕ ರಾಜಕೀಯಕ್ಕೆ ಎಸ್.ಎಂ. ಕೃಷ್ಣ ನಿವೃತ್ತಿ ಘೋಷಿಸಿದ್ದಾರೆ.
Join The Telegram | Join The WhatsApp |