ಹುಕ್ಕೇರಿ:- ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸುಕ್ಷೇತ್ರ ಕ್ಯಾರ ಗುಡ್ಡದ ಶ್ರೀ ಸಮರ್ಥ ಸದ್ಗುರು ಅವಜಿಕರ ಧ್ಯಾನ ಯೋಗಾಶ್ರಮದ ಶ್ರೀ ಸಮರ್ಥ ಸದ್ಗುರು ಅವಜೀಕರ ಮಹಾರಾಜರ ಮತ್ತು ಶ್ರೀ ಸಮರ್ಥ ಸದ್ಗುರು ಜಗನ್ನಾಥ ಮಹಾರಾಜರ ಸ್ಮರಣಾರ್ಥ ಸಪ್ತಾಹ ಕಾರ್ಯಕ್ರಮವು ಗುರುವಾರ ದಿನಾಂಕ 21.09.2023 ರಂದು ಸುಕ್ಷೇತ್ರ ಇಂಚಿಗೇರಿ ಮಠದ ಅಧಿಪತಿಗಳಾದ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸ ಬೋಧ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭಗೊಂಡು ರಾತ್ರಿ ವಿವಿಧ ಊರುಗಳಿಂದ ಆಗಮಿಸಿದ ಭಜನಾ ಮೇಳಗಳಿಂದ ಜಾಗರಣೆ ಜರುಗಿತು.
ಶುಕ್ರವಾರ ದಿನಾಂಕ 22 /9/ 2023 ರಂದು ಕರ್ತೃ ಗದ್ದಿಗೆಗೆ ವಿಶೇಷ ಪೂಜೆ ಅಲಂಕಾರ ಸಂಪ್ರದಾಯದ ವಿಧಿ ವಿಧಾನ ಮೂಲಕ ಪೂಜಾ ಕಂಕರ್ಯ ಭಜನೆ ಜರಗಿತು ಮುಂಜಾನೆ 10 ಗಂಟೆಗೆ ಬ್ರಹ್ಮ ವೇದಿಕೆ ಶ್ರೀರಾಮದಾಸರ ವಿರಚಿತ ದಾಸ ಬೋಧದ ವಿಮಲ ಬ್ರಹ್ಮ ನಿರೂಪಣೆಯೊಂದಿಗೆ ವೇದಿಕೆ ಪ್ರಾರಂಭಗೊಂಡು
ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನದ ನಂತರ ಪುಷ್ಪರುಷ್ಠಿಗೊಂಡು ಮಹಾಪ್ರಸಾದದೊಂದಿಗೆ ಸಪ್ತಾಹ ಮಂಗಳ ಗೊಂಡಿತ್ತು
ಕಾರ್ಯಕ್ರಮದ ನಿರೂಪಣೆ ಪರಮಪೂಜ್ಯ ಅಭಿನವ ಮಂಜುನಾಥ ಮಹಾರಾಜರು ಕ್ಯಾರಗುಡ್ಡ ಮಠ ಹುಕ್ಕೇರಿ. ಇವರು ನೆರವೇರಿಸಿದರು
ಕಾರ್ಯಕ್ರಮಕ್ಕೆ ಭಾಗವಹಿಸಿದ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಮೃತ್ಯುಂಜಯ ಸ್ವಾಮಿಗಳು ಬೆಳವಿ. ರಾಯಬಾಗ ಕ್ಷೇತ್ರದ ಶಾಸಕರಾದ ದುರ್ಯೋಧನ ಐಹೊಳೆ. ಮಹಾವೀರ ನಿಲಜಗಿ.
ಹಾಗೂ ಗುರು ಹಿರಿಯರು ಸರ್ವ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ