ಸಿರುಗುಪ್ಪ : –ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಭೋಜನಾಲಯದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಶಾಲೆಯಲ್ಲಿ ಶ್ರೀ ಗಣೇಶ ಮೂರ್ತಿ ಪ್ರತಿಷ್ಟಾಪಿಸಿ ಸಂಭ್ರಮ ಸಡಗರದಿಂದ ಹಬ್ಬ ಆಚರಿಸಲಾಯಿತು.
ಶಿಕ್ಷಕರಾದ ಶ್ರೀಶೈಲ ಬಿರಾದರ ಮಾತನಾಡಿ ಪ್ರತಿವರ್ಷದಂತೆ ಶ್ರೀ ವಿಘ್ನ ನಿವಾರಕ, ಬುದ್ದಿ ಪ್ರದಾಯಕನೆಂದೇ ಪೂಜಿಸಲ್ಪಡುವ ಶ್ರೀ ಗಣೇಶನನ್ನು ಪ್ರತಿಷ್ಟಾಪಿಸಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳಿAದ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ಹಬ್ಬದ ಆಚರಣೆ ನಿಮಿತ್ತ ನಿಲಯದಲ್ಲಿನ ಮಕ್ಕಳ ಮನರಂಜನೆಗಾಗಿ ಭಕ್ತಿಗೀತೆ, ಭಾವಗೀತೆ, ಜನಪದ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಬ್ಬದ ಪ್ರಯುಕ್ತ ಶಾಲೆಯ ಬಾಗಿಲುಗಳಿಗೆ ತಳಿರು ತೋರಣ, ಆವರಣದಲ್ಲಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ, ವಿದ್ಯಾರ್ಥಿಗಳಲ್ಲಿ ಉಕ್ಕಿದ ಉತ್ಸಾಹ ಕಂಡುಬAದಿತು. ಪ್ರಸಾದ ವಿತರಣೆ, ಸಿಹಿ ಭೋಜನವನ್ನು ಏರ್ಪಡಿಸಲಾಗಿತ್ತು.
ಇದೇ ವೇಳೆ ದೈಹಿಕ ಶಿಕ್ಷಕ ಕೆ.ಶಿವಣ್ಣ, ನಿಲಯ ಪಾಲಕ ವೆಂಕಟರಾಮರೆಡ್ಡಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಿಬ್ಬಂದಿಗಳು ಇದ್ದರು.
ವರದಿ :-ಶ್ರೀನಿವಾಸ ನಾಯ್ಕ