Join The Telegram | Join The WhatsApp |
ರೋಣ ; ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ.
ಶಿರಸ್ತೇದಾರ್ ಮೀನಾಕ್ಷಿ ರತ್ನಾಕರ ಅವರ ಅಧ್ಯಕ್ಷತೆಯಲ್ಲಿ ಶ್ರೀ ಮಹಾಯೋಗಿ ವೇಮನರ 612ನೇ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಇದೇ ವೇಳೆ ಮಾತನಾಡಿದ ಎಂ.ಎನ್.ರತ್ನಾಕರ ಅವರು, ಕವಿ ಸಮಾಜ ಚಿಂತಕರು ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ವೇಮನ ಮಹಾಯೋಗಿಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಅನಿಸಿಕೆ ಹಂಚಿಕೊಂಡರು.
ಇದೇ ವೇಳೆ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಶ್ರೀ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬಿ.ಎಂ.ಮಾಳೆಕೊಪ್ಪ, ವಿದ್ಯಾ ಡಿಸ್ಲೆ, ಎಸ್.ಡಿ. ತಳವಾರ, ರೆಡ್ಡಿ ಸೇವಾ ಸಮಿತಿ ಅಧ್ಯಕ್ಷರು ಕುಮಾರ ಗಡಗಿ, ಉಪಾಧ್ಯಕ್ಷರಾದ ರಾಜು ಕೆಂಚರಡ್ಡಿ, ಹನಮಂತ ಗಡಗಿ, ಬಸು ಗಡಗಿ, ನಾಗೇಶ ಗಡಗಿ, ಪುರಸಭೆ ಸದಸ್ಯರು ಮುತ್ತಣ್ಣ ಗಡಗಿ, ಶಿವಾನಂದಪ್ಪ ಗಡಗಿ ಸೇರಿದಂತೆ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Join The Telegram | Join The WhatsApp |